ನೇಜಾರು ನಾಲ್ವರ ಹತ್ಯೆ ಪ್ರಕರಣ: ನಮಗೆ ಹೊರಗೆ ಓಡಾಟ ಮಾಡಲು ಭಯವಾಗುತ್ತಿದೆ: ಮನೆ ಯಜಮಾನ ನೂರು ಮೊಹಮ್ಮದ್ ಹೇಳಿಕೆ - Mahanayaka

ನೇಜಾರು ನಾಲ್ವರ ಹತ್ಯೆ ಪ್ರಕರಣ: ನಮಗೆ ಹೊರಗೆ ಓಡಾಟ ಮಾಡಲು ಭಯವಾಗುತ್ತಿದೆ: ಮನೆ ಯಜಮಾನ ನೂರು ಮೊಹಮ್ಮದ್ ಹೇಳಿಕೆ

nejaru
14/11/2023

ಉಡುಪಿ:  ಪೊಲೀಸರ ತನಿಖೆಗೆ ನಾನು ಸಂಪೂರ್ಣ ಸಹಕಾರ ಕೊಡುತ್ತೇನೆ ತನಿಖಾಧಿಕಾರಿಗಳು ನಮಗೆ ಸಂಪೂರ್ಣ ಭರವಸೆ ಕೊಟ್ಟಿದ್ದಾರೆ. ಕುಟುಂಬದ ಬಳಿ ಇರುವ ಎಲ್ಲ ಮಾಹಿತಿಗಳನ್ನು ಹಂಚಿಕೊಂಡಿದ್ದೇನೆ.  ನಾಲ್ಕು ಫೋನ್ ಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ನನ್ನ ಮತ್ತು ಮಗನ ಫೋನನ್ನು ಪೊಲೀಸರು ತಪಾಸಣೆ ಮಾಡಿ ವಾಪಸ್ ಕೊಟ್ಟಿದ್ದಾರೆ. ಫೋನ್ ಗಳಲ್ಲಿ ಕೆಲವು ಮಾಹಿತಿಗಳು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನನಗೆ ಎಲ್ಲರೂ ಬಂದು ಸಾಂತ್ವನ ಧೈರ್ಯವನ್ನು ತುಂಬಿಸುತ್ತಿದ್ದಾರೆ. ಪೊಲೀಸರು ಕರೆದರೆ ನಾನು 24 ಗಂಟೆ ಮಾಹಿತಿ ಕೊಡಲು ಸಿದ್ದ ಎಂದು ಉಡುಪಿಯ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಯಜಮಾನ ನೂರು ಮೊಹಮ್ಮದ್ ಹೇಳಿಕೆ ನೀಡಿದ್ದಾರೆ.

ಕೌಟುಂಬಿಕ ಕಲಹದಿಂದ ಹತ್ಯೆ ಎಂದು ಸುದ್ದಿಗಳು ಪ್ರಸಾರವಾಗುತ್ತಿದೆ ಆದ್ರೆ, ಕೌಟುಂಬಿಕ ಕಲಹ ಎಂಬುದರಲ್ಲಿ ಸತ್ಯಾಂಶ ಇಲ್ಲ.  ನಮಗೆ ಮದುವೆಯಾಗಿ 30 ವರ್ಷ ಆಯ್ತು 15 ವರ್ಷ ನಾವು ವಿದೇಶದಲ್ಲಿ ಇದ್ದೆವು.  ಮುಂದಿನ 15 ದಿನದಲ್ಲಿ ಕುಟುಂಬ ವಿದೇಶಕ್ಕೆ ಬರಬೇಕಿತ್ತು, ಮುಂದಿನ ವರ್ಷ ಮಗನಿಗೆ ಮದುವೆ ಮಾಡುವ ಮಾತುಕತೆ ನಡೆದಿತ್ತು. ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಿ ಆಗ ನಮಗೆ ತೃಪ್ತಿಯಾಗುತ್ತದೆ ಎಂದು ಅವರು ಹೇಳಿದರು.

ಯಾರು ಈ ಕೃತ್ಯ ಮಾಡಿದ್ದಾರೆ ಬೇಗ ತನಿಖೆ ಮಾಡಿ, ಅಪರಾಧಿಯನ್ನು ಬೇಗ ಬಂಧಿಸಿದರೆ ಭಯದ ವಾತಾವರಣ ದೂರವಾಗುತ್ತದೆ. ಆರೋಪಿಯನ್ನು ಬಂಧಿಸುವವರೆಗೆ ನಮಗೆ ಹೊರಗೆ ಓಡಾಟ ಮಾಡೋದು ಭಯವಾಗುತ್ತಿದೆ. ನಮ್ಮ ಹಿಂದೆ ಯಾರಿದ್ದಾರೆ ನಮಗೆ ಗೊತ್ತಿಲ್ಲ. ನಮ್ಮ ಸುತ್ತಮುತ್ತ ಯಾರು ಓಡಾಡುತ್ತಿದ್ದಾರೆ ನಮಗೆ ಗೊತ್ತಿಲ್ಲ, ಮಗನಿಗೆ ಎಲ್ಲಿಗೂ ಓಡಾಡಬೇಡ ಎಂದು ಹೇಳಿದ್ದೇನೆ ಎಂದು ಅವರು ಹೇಳಿದರು.

ನನ್ನ ಖಾಸಗಿ ಜೀವನದಲ್ಲಿ ಏನೇ ನಷ್ಟ ಆದರೂ ಅದು ನನಗೆ. ನಾನು ಅದನ್ನು ಸಾರ್ವಜನಿಕವಾಗಿ ಹೇಳಲು ಇಚ್ಚಿಸುವುದಿಲ್ಲ ಎಂದು ಕುಟುಂಬದ ಯಜಮಾನ ನೂರು ಮೊಹಮ್ಮದ್ ಹೇಳಿಕೆ ನೀಡಿದ್ದಾರೆ.




ಇದನ್ನೂ ಓದಿ:

ನೇಜಾರು ನಾಲ್ವರ ಭೀಕರ ಹತ್ಯೆ ಪ್ರಕರಣ: ಆಟೋದಲ್ಲೇ ಹೋಗಿ 15 ನಿಮಿಷದಲ್ಲೇ ವಾಪಸ್‌ ಬಂದಿದ್ದ ಹಂತಕ: ನಾಲ್ವರನ್ನು ಕೊಂದಿದ್ದೇಕೆ?


ಇದನ್ನೂ ಓದಿ:

ಉಡುಪಿ: ಇನ್ನೂ ಸಿಗದ ಹಂತಕನ ಸುಳಿವು | ನಾಲ್ಕು ಬಾರಿ ವಾಹನ ಬದಲಿಸಿ ಹಂತಕ ಪರಾರಿ?


ಇದನ್ನೂ ಓದಿ:

ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ : ಸರಕಾರದ ಬೇಜವಾಬ್ದಾರಿತನ ಖಂಡನೀಯ : ಉಡುಪಿ ಜಿಲ್ಲಾ ಮುಸ್ಲಿಂ  ಒಕ್ಕೂಟ


 

ಇತ್ತೀಚಿನ ಸುದ್ದಿ