ಬಸ್ ನಿಲ್ದಾಣದಲ್ಲಿ ಮಲಗಿದ್ದ ಭಿಕ್ಷುಕನ ಭೀಕರ ಹತ್ಯೆ!
13/02/2021
ವಿಜಯಪುರ: ಭಿಕ್ಷುಕನೋರ್ವನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ವಿಶ್ವೇಶ್ವರ ಕಾಲನಿಯ ಸಿಟಿಬಸ್ ನಿಲ್ದಾಣದಲ್ಲಿ ನಡೆದಿದ್ದು, ಕಳೆದ ಮೂರು ನಾಲ್ಕು ತಿಂಗಳಿನಿಂದ ಇದೇ ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದ ಭಿಕ್ಷುಕನನ್ನು ಹತ್ಯೆ ಮಾಡಲಾಗಿದೆ.
ಬಸ್ ನಿಲ್ದಾಣದಲ್ಲಿ ರಕ್ತದ ಮಡುವಲ್ಲಿ ಭಿಕ್ಷುಕನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಪಿಎಸ್ ಐ ಶರಣಬಸಪ್ಪ ಅವರು ತನಿಖೆ ನಡೆಸುತ್ತಿದ್ದು, ಭಿಕ್ಷುಕ ಕಳೆದ ಮೂರು ನಾಲ್ಕು ತಿಂಗಳಿನಿಂದ ಇದೇ ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ.
ಭಿಕ್ಷುಕನ ಕೊಲೆಗೆ ಕಾರಣ ಏನು ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಇದಲ್ಲದೇ ಭಿಕ್ಷುಕನ ಮುಖದ ಗುರುತು ಕೂಡ ಸಿಗುತ್ತಿಲ್ಲವಾದ್ದರಿಂದ ಪೊಲೀಸರು ಇನ್ನಷ್ಟು ಕೋನಗಳಿಂದ ತನಿಖೆ ನಡೆಸುವಂತಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.