ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ‌ ಪ್ರಕರಣ: ಜಾಮೀನು ಪಡೆದ ನಾಲ್ಕೇ ದಿನದಲ್ಲಿ ಆರೋಪಿ ಮುರುಘಾಶ್ರೀ ಅರೆಸ್ಟ್ - Mahanayaka

ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ‌ ಪ್ರಕರಣ: ಜಾಮೀನು ಪಡೆದ ನಾಲ್ಕೇ ದಿನದಲ್ಲಿ ಆರೋಪಿ ಮುರುಘಾಶ್ರೀ ಅರೆಸ್ಟ್

murugha shree
20/11/2023

ದಾವಣಗೆರೆ: ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಸ್ವಾಮೀಜಿ ಮುರುಘಾಶ್ರೀ ಜಾಮೀನು ಪಡೆದು ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಮತ್ತೆ ಅರೆಸ್ಟ್‌ ಆಗಿದ್ದಾರೆ.

ವಿಚಾರಣೆಗೆ ಕೋರ್ಟ್‌ ಗೆ ಹಾಜರಾಗದೇ, ವಿಡಿಯೋ ಕಾನ್ಫರೆನ್ಸ್‌ ನಲ್ಲಿ ಹಾಜರಾಗುವುದಾಗಿ ಆರೋಪಿ ಸ್ವಾಮೀಜಿ ಪಟ್ಟು ಹಿಡಿದ್ದಿದ್ದು, ಈ ಹಿನ್ನೆಲೆಯಲ್ಲಿ  ಕೋರ್ಟ್‌ ಅರೆಸ್ಟ್‌ ವಾರೆಂಟ್‌ ನೀಡಿತ್ತು.

ತನಿಖಾಧಿಕಾರಿ ಡಿವೈಎಸ್‌ ಪಿ ಅನಿಲ್‌, ಸಿಪಿಐ ಮುದ್ದುರಾಜ್‌ ನೇತೃತ್ವದ ಅಧಿಕಾರಿಗಳ ತಂಡ ಮಠಕ್ಕೆ ಆಗಮಿಸಿತ್ತು. ಬಳಿಕ ಆರೋಪಿ ಶ್ರೀಯ ಕೋಣೆಗೆ ತೆರಳಿ ಅರೆಸ್ಟ್‌ ವಾರೆಂಟ್‌ ತೋರಿಸಿ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ:

ಲೈಂಗಿಕ ದೌರ್ಜನ್ಯದ ಆರೋಪಿ ಮುರುಘಾಶ್ರೀ ಮತ್ತೆ ಬಂಧನ ಸಾಧ್ಯತೆ: ಮಠಕ್ಕೆ ಆಗಮಿಸಿದ ಪೊಲೀಸರು


 

ಇತ್ತೀಚಿನ ಸುದ್ದಿ