ಆಳ ಸಮುದ್ರದಲ್ಲಿ ಬೃಹತ್ ಗಾತ್ರದ ಮೀನಿಗೆ ಡಿಕ್ಕಿ ಹೊಡೆದ ಮಂಗಳೂರಿನ ಬೋಟ್!
13/02/2021
ಮಂಗಳೂರು: ಭಾರೀ ಗಾತ್ರದ ಮೀನೊಂದು ಆಳ ಸಮುದ್ರದಲ್ಲಿ ಬೋಟ್ ಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಮೀನು ಡಿಕ್ಕಿ ಹೊಡೆದ ಪರಿಣಾಮ ಬೋಟ್ ಗೆ ಹಾನಿಯಾಗಿದೆ.
ಮಂಗಳೂರಿನ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗೆ ಬೃಹತ್ ಮೀನೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಮೀನಿಗೂ ಏಟು ತಗಲಿದ್ದು, ಮೀನಿನ ಬಾಯಿ ಮುರಿದು ತೀವ್ರವಾಗಿ ರಕ್ತ ಸ್ರಾವವಾಗಿದೆ. ಡಿಕ್ಕಿಯ ರಬಸಕ್ಕೆ ಬೋಟ್ ಗೆ ಕೂಡ ಹಾನಿಯಾಗಿದೆ.
ಘಟನೆಯನ್ನು ಮೀನುಗಾರರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಣ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಡಿಕ್ಕಿಯಾದ ಮೀನು ಯಾವುದು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.