ಹಣ್ಣಿನಂಗಡಿಗೆ ಬೆಂಕಿ: ಅಂಗಡಿಯೊಳಗೆ ಸಿಲುಕಿದ ಯುವಕ ಸಜೀವ ದಹನ - Mahanayaka
2:01 AM Wednesday 5 - February 2025

ಹಣ್ಣಿನಂಗಡಿಗೆ ಬೆಂಕಿ: ಅಂಗಡಿಯೊಳಗೆ ಸಿಲುಕಿದ ಯುವಕ ಸಜೀವ ದಹನ

13/02/2021

ಕೊಪ್ಪಳ: ಹಣ್ಣಿನಂಗಡಿಯಲ್ಲಿ  ಸಂಭವಿಸಿದ ಅಗ್ನಿ ಅವಘಡದಲ್ಲಿ ಯುವಕನೋರ್ವ ಸಜೀವ ದಹನವಾಗಿರುವ ದಾರುಣ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಗೆ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ. ಬೆಂಕಿ ಹತ್ತಿಕೊಂಡ ವೇಳೆ ಅಂಗಡಿಯೊಳಗೆ 18 ವರ್ಷದ ವಯಸ್ಸಿನ ಎಳೆಯ ಯುವಕ ವೀರೇಶ್ ಮುಂಡರಗಿ ಮಾತ್ರ ಇದ್ದ. ಯುವಕ ಬೆಂಕಿಯಲ್ಲಿ ಸಜೀವವಾಗಿ ದಹನವಾಗಿದ್ದಾನೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದೆ. ಕೊಪ್ಪಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ