ಸಚಿವ ರಾಮುಲು ಎದುರೇ ಆತ್ಮಹತ್ಯೆಗೆ ಮುಂದಾದ ಸ್ವಾಮೀಜಿ!
13/02/2021
ಚಿತ್ರದುರ್ಗ: ಪೀಠಾಧಿಕಾರ ಕೈತಪ್ಪಿದ ಬೇಸರದಲ್ಲಿ ಸಚಿವ ಶ್ರೀರಾಮುಲು ಮುಂದೆಯೇ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು, ಘಟನೆಯಿಂದ ಕೆಲ ಸಚಿವ ಶ್ರೀರಾಮುಲು ಕಕ್ಕಾಬಿಕ್ಕಿಯಾದ ಪ್ರಸಂಗವೂ ನಡೆಯಿತು.
ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದ್ದರು. ಈ ವೇಳೆ ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರ ಸ್ವಾಮೀಜಿ ವಿಷ ಸೇವಿಸಲು ಮುಂದಾಗಿದ್ದು, ಈ ವೇಳೆ ಪಕ್ಕದಲ್ಲಿಯೇ ಇದ್ದ ಪೊಲೀಸರು ಸ್ವಾಮೀಜಿಯ ಕೈಯಿಂದ ವಿಷದ ಬಾಟಲಿಯನ್ನು ಕಿತ್ತುಕೊಂಡು ಅನಾಹುತ ತಪ್ಪಿಸಿದ್ದಾರೆ.
ಅಧಿಕಾರ ಹಾಗೂ ಹಣದ ಬಲದಿಂದ ತನಗೆ ನ್ಯಾಯಯುತವಾಗಿ ಸಿಗಬೇಕಾದ ಪೀಠಾಧಿಕಾರ ಕೈತಪ್ಪಿದೆ ಎಂದು ಸ್ವಾಮೀಜಿ ಅವರು ಸಚಿವ ರಾಮುಲು ಅವರ ಬಳಿಯಲ್ಲಿ ನೋವು ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಗಳಿಂದ ಕೆಲಕಾಲ ಸಚಿವ ರಾಮುಲು ಕಕ್ಕಾಬಿಕ್ಕಿಯಾಗಿದ್ದಾರೆ.