ಇಸ್ರೇಲ್-ಹಮಾಸ್ ಕದನ ವಿರಾಮ ಮತ್ತಷ್ಟು ವಿಸ್ತರಿಸುವ ಪ್ರಯತ್ನ: ಇಂದು ಹೆಚ್ಚಿನ ಒತ್ತೆಯಾಳುಗಳ ಬಿಡುಗಡೆ - Mahanayaka
3:29 AM Wednesday 18 - September 2024

ಇಸ್ರೇಲ್-ಹಮಾಸ್ ಕದನ ವಿರಾಮ ಮತ್ತಷ್ಟು ವಿಸ್ತರಿಸುವ ಪ್ರಯತ್ನ: ಇಂದು ಹೆಚ್ಚಿನ ಒತ್ತೆಯಾಳುಗಳ ಬಿಡುಗಡೆ

29/11/2023

ಗಾಝಾ ಪಟ್ಟಿಯಲ್ಲಿ ಉಭಯ ಕಡೆಗಳ ನಡುವೆ ನಡೆಯುತ್ತಿರುವ ಕದನ ವಿರಾಮದ ಕೊನೆಯ ದಿನವಾದ ಬುಧವಾರ ಹಮಾಸ್ ಮತ್ತು ಇಸ್ರೇಲ್ ಹೆಚ್ಚಿನ ಒತ್ತೆಯಾಳುಗಳನ್ನು ಮತ್ತು ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಲಿವೆ. ಹಮಾಸ್ ಇಂದು ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಹೆಸರುಗಳ ಪಟ್ಟಿಯನ್ನು ಸ್ವೀಕರಿಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಹಮಾಸ್ ಮಂಗಳವಾರ ಇನ್ನೂ 12 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 10 ಇಸ್ರೇಲಿಗಳು ಮತ್ತು ಇಬ್ಬರು ಥಾಯ್ ಪ್ರಜೆಗಳು. ಏತನ್ಮಧ್ಯೆ, ಇಸ್ರೇಲ್ 30 ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ.

ಮಧ್ಯಸ್ಥಿಕೆ ವಹಿಸಿರುವ ಕತಾರ್ ಕದನ ವಿರಾಮಕ್ಕೆ ಮತ್ತೊಂದು ವಿಸ್ತರಣೆಗೆ ಮಾತುಕತೆ ನಡೆಸಬಹುದೇ ಎಂಬುದರ ಮೇಲೆ ಗಮನ ಕೇಂದ್ರೀಕೃತವಾಗಿದೆ. ಕದನ ವಿರಾಮದ ಭಾಗವಾಗಿ ಒಪ್ಪಿಕೊಂಡ 150 ಒತ್ತೆಯಾಳುಗಳಲ್ಲಿ ಹಮಾಸ್ ಈವರೆಗೆ ಒಟ್ಟು 81 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇವರಲ್ಲಿ ಹೆಚ್ಚಿನವರು ಇಸ್ರೇಲಿ ಮಹಿಳೆಯರು ಮತ್ತು ಮಕ್ಕಳು ಮತ್ತು ವಿದೇಶಿ ಪ್ರಜೆಗಳು ಇದ್ದರು. ಪ್ರಸ್ತುತ ನಡೆಯುತ್ತಿರುವ ಕದನ ವಿರಾಮದ ಅಡಿಯಲ್ಲಿ ಇಸ್ರೇಲ್ 180 ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ.


Provided by

ಮಂಗಳವಾರ ಹಮಾಸ್ ಮತ್ತು ಇಸ್ರೇಲಿ ಪಡೆಗಳು ಹೋರಾಟದ ವಿರಾಮವನ್ನು ಮತ್ತಷ್ಟು ವಿಸ್ತರಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದವು.

ಇತ್ತೀಚಿನ ಸುದ್ದಿ