ಪ್ರೇಮಿಗಳ ದಿನದಂದು ಪತ್ನಿಗೆ ತನ್ನ ಕಿಡ್ನಿಯನ್ನೇ ಉಡುಗೊರೆಯಾಗಿ ನೀಡಿದ ಪತಿ! - Mahanayaka

ಪ್ರೇಮಿಗಳ ದಿನದಂದು ಪತ್ನಿಗೆ ತನ್ನ ಕಿಡ್ನಿಯನ್ನೇ ಉಡುಗೊರೆಯಾಗಿ ನೀಡಿದ ಪತಿ!

14/02/2021

ಅಹ್ಮದಾಬಾದ್:  ಗುಜರಾತ್ ನ ಅಹ್ಮದಾಬಾದ್ ನಲ್ಲಿ ಪ್ರೇಮಿಗಳ ದಿನದಂದೇ ಪತಿ, ಪತ್ನಿಗೆ ಜೀವನ ವಿಡೀ ಮರೆಯದಂತಹ ಉಡುಗೊರೆ ನೀಡಿದ್ದು, ಮದುವೆಯಾಗಿ 23 ವರ್ಷ ಜೊತೆಯಾಗಿ ಸಂಸಾರ ನಡೆಸುತ್ತಿರುವ ಈ ದಂಪತಿಯ ಅನ್ಯೋನ್ಯತೆಯ ಬದುಕಿಗೆ ಇದೇ ಸಾಕ್ಷಿಯಾಗಿದೆ.

44 ವರ್ಷದ ರೀತಾ ಹಾಗೂ ವಿನೋದ್ ಪಟೇಲ್ ಅವರು ಫೆ.14ರಂದು ವಿವಾಹವಾಗಿದ್ದರು.  ಅವರು  ವಿವಾಹವಾಗಿ 23 ವರ್ಷಗಳು ತುಂಬಿದೆ. ಇದೇ ಸಂದರ್ಭದಲ್ಲಿ ರೀತಾ ಅವರಿಗೆ  ಗಂಭೀರವಾದ ಆರೋಗ್ಯ ಸಮಸ್ಯೆಯೊಂದು ಕಾಣಿಸಿಕೊಂಡಿದೆ. ರೀತಾ ಅವರಿಗೆ ಇಮ್ಯೂನ್ ಸಿಸ್ಟಮ್ ಗೆ ತೊಂದರೆಯಾಗಿ  ಕಿಡ್ನಿ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದೆ.

ಇದೇ ಸಂದರ್ಭದಲ್ಲಿ ಪತಿ ವಿನೋದ್ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ತನ್ನ ಕಿಡ್ನಿಯನ್ನು ಪತ್ನಿಗೆ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಅದರಂತೆಯೇ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ್ದು, ಈ ವೇಳೆ ವಿನೋದ್ ಅವರ ಕಿಡ್ನಿ ಪತ್ನಿಗೆ ಸರಿ ಹೊಂದುತ್ತದೆ ಎನ್ನುವುದು ತಿಳಿದುಬಂದಿದೆ.  ಹೀಗಾಗಿ ತನ್ನ ಪತ್ನಿಗೆ ಕಿಡ್ನಿ ನೀಡಲು ಅಂತಿಮವಾಗಿ ವಿನೋದ್ ಸಜ್ಜಾಗಿದ್ದಾರೆ.

ಇತ್ತೀಚಿನ ಸುದ್ದಿ