ಉಡುಪಿ ಜಿಲ್ಲಾ ಸಮನ್ವಯ ವೇದಿಕೆಯ ಮಾಸಿಕ ಸಭೆ
ಕುಂದಾಪುರ: ಸರ್ಕಾರಿ ಶಾಲೆ, ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಯಾಗಲಿ, ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಇದರ ಉಡುಪಿ ಜಿಲ್ಲಾ ಸಮನ್ವಯ ವೇದಿಕೆಯ ಮಾಸಿಕ ಸಭೆ ನ. 29ರಂದು ಸಮನ್ವಯ ವೇದಿಕೆಯ ಕಚೇರಿ ಕುಂದಾಪುರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಮನ್ವಯ ವೇದಿಕೆ ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ವಿ. ನಾಗರಾಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಮನ್ವಯ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತವಿಕವಾಗಿ ಮಾತನಾಡಿದರು.
ಪಡಿ ಸಂಸ್ಥೆಯ ತರಬೇತಿ ಸಂಯೋಜಕರಾದ ವಿವೇಕ್, ಸಭೆಯಲ್ಲಿ ಮಕ್ಕಳ ಮಾಸೋತ್ಸವ ಕಾರ್ಯಕ್ರಮಗಳ ಬಗ್ಗೆ ಅತಿ ಮುಖ್ಯವಾಗಿ ಚರ್ಚಿಸಿ ಕಾರ್ಯಕ್ರಮವನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ಮತ್ತು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ದಿವಾಕರ್ ಕುಮಾರ್ ಮಾತನಾಡಿ, ಕಾರ್ಕಳದಲ್ಲಿ ಸಮನ್ವಯ ವೇದಿಕೆಯ ಕಾರ್ಕಳದ ತಾಲೂಕು ಸಮಿತಿ ರಚನೆ ಮಾಡುವ ಬಗ್ಗೆ ಚರ್ಚಿಸಿ ಆದಷ್ಟು ಬೇಗನೆ ಪೂರ್ವಭಾವಿ ತಯಾರಿ ಸಭೆಯನ್ನು ಮಾಡಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಂಡು ಸಮಿತಿ ರಚನೆಗೆ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಸಮನ್ವಯ ವೇದಿಕೆ ಬ್ರಹ್ಮಾವರ ವಲಯದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕುಂದಾಪುರ ಪುರಸಭಾ ಘಟಕದ ಅಧ್ಯಕ್ಷ ಅಶ್ವತ್ ಕುಮಾರ್. ಸಮನ್ವಯ ವೇದಿಕೆ ಕುಂದಾಪುರ ತಾಲೂಕು, ಕೋಶಾಧಿಕಾರಿ ಕೃಷ್ಣಾನಂದ ಶಾನುಭಾಗ್. ಸಮನ್ವಯ ವೇದಿಕೆ ಕುಂದಾಪುರ ತಾಲೂಕು ಸಂಘಟನಾ ಕಾರ್ಯದರ್ಶಿ ವರದಾ ಆಚಾರ್ಯ ಅಂಕದ ಕಟ್ಟೆ, ಬಿಜಾಡಿ ಗ್ರಾಮ ಪಂಚಾಯತ್ ಘಟಕದ ಉಪಾಧ್ಯಕ್ಷೆ ಹೇಮಾ ಬಿಜಾಡಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ವಾಸುದೇವ ಆಚಾರ್ಯ ಪ್ರಾರ್ಥಿಸಿದರು.
ಕುಂದಾಪುರ ತಾಲೂಕು ಕಾರ್ಯದರ್ಶಿ ಪ್ರಮೋದಾ ಕೆ. ಶೆಟ್ಟಿ ಸ್ವಾಗತಿಸಿದರು. ಕುಂದಾಪುರ ತಾಲೂಕು ಕಾರ್ಯದರ್ಶಿ ಪ್ರಮೋದ ಕೆ. ಶೆಟ್ಟಿ ನಿರೂಪಿಸಿದರು. ಸಮನ್ವಯ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್ ವಂದಿಸಿದರು.