'ಇಂಡಿಯಾ' ಮೈತ್ರಿಕೂಟದ ಸಭೆಗೆ ಹಾಜರಾಗಲ್ವಂತೆ ಮಮತಾ ಬ್ಯಾನರ್ಜಿ: 'ಪಂಚ' ರಿಸಲ್ಟ್ ಬೆನ್ನಲ್ಲೇ ಹೊಸ ಸಮಸ್ಯೆ ಸೃಷ್ಟಿ.? - Mahanayaka
6:13 AM Thursday 6 - February 2025

‘ಇಂಡಿಯಾ’ ಮೈತ್ರಿಕೂಟದ ಸಭೆಗೆ ಹಾಜರಾಗಲ್ವಂತೆ ಮಮತಾ ಬ್ಯಾನರ್ಜಿ: ‘ಪಂಚ’ ರಿಸಲ್ಟ್ ಬೆನ್ನಲ್ಲೇ ಹೊಸ ಸಮಸ್ಯೆ ಸೃಷ್ಟಿ.?

04/12/2023

ಪಶ್ಚಿಮ ಬಂಗಾಳ ರಾಜ್ಯದ ಸಿಎಂ ಮಮತಾ ಬ್ಯಾನರ್ಜಿ ಅವರು ಬುಧವಾರ ನಡೆಯಲಿರುವ ‘ಇಂಡಿಯಾ’ ಮೈತ್ರಿಕೂಟದ ಸಭೆಗೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ ವಿಪಕ್ಷಗಳ ಮುಂದಿನ ಸಭೆಗೆ ಕರೆ ನೀಡಿದ್ದರು. ಆದರೆ ಉತ್ತರ ಬಂಗಾಳದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮ ಇರುವುದರಿಂದ ಮಮತಾ ಬ್ಯಾನರ್ಜಿ ಅವರು ಈ ಸಭೆಗೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಷ್ಟೇ ಅಲ್ಲದೇ, ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್‌ನ ಯಾವುದೇ ನಾಯಕರು ಸಭೆಗೆ ಹೋಗದಿರುವ ಸಾಧ್ಯತೆಯಿದ್ದು, ಈ ಸಭೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

3 ರಾಜ್ಯಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ ವಿಪಕ್ಷಗಳ ಮುಂದಿನ ಸಭೆಗೆ ಕರೆ ನೀಡಿದ್ದರು. ಕಳೆದ ಆಗಸ್ಟ್ 31 ಮತ್ತು ಸೆ. 1ರಂದು ಮುಂಬೈನಲ್ಲಿ ನಡೆದ ಸಭೆಯಿಂದ ಮೂರು ತಿಂಗಳ ಬಳಿಕ ಸಭೆ ನಡೆಯುತ್ತಿದೆ.

ಈ ಸಭೆಯಲ್ಲಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಯೋಜನೆಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.

ಇತ್ತೀಚಿನ ಸುದ್ದಿ