ಮದುವೆ ಸಮಾರಂಭದಲ್ಲಿ ನಡೀತು ಕ್ರೂರ ಕೃತ್ಯ: ಪ್ಲೇಟ್ ಮೈಗೆ ತಾಗಿತೆಂದು ವೇಟರ್ ನನ್ನೇ ಕೊಂದು ಕಾಡಿಗೆ ಎಸೆದ ಕಿರಾತಕರು..!
ಕಳೆದ ತಿಂಗಳು ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವೇಟರ್ ಒಬ್ಬರ ಕೈಯಲ್ಲಿದ್ದ ಟ್ರೇ ಕೆಲವು ಅತಿಥಿಗಳನ್ನು ಸ್ಪರ್ಶಿಸಿದ ಕಾರಣ ಅವರನ್ನು ಥಳಿಸಿ ಹತ್ಯೆ ಮಾಡಲಾಗಿತ್ತು.
ನವೆಂಬರ್ 17 ರಂದು ಈ ಘಟನೆ ನಡೆದಾಗ ಪಂಕಜ್ ಅಂಕುರ್ ವಿಹಾರ್ ನ ಸಿಜಿಎಸ್ ವಾಟಿಕಾದಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ಸಮಾರಂಭದಲ್ಲಿ ಪಂಕಜ್ ಅವರು ತೊಳೆಯಲು ಕೊಂಡೊಯ್ಯುತ್ತಿದ್ದ ತಟ್ಟೆಗಳು ರಿಷಭ್ ಮತ್ತು ಅವರ ಇಬ್ಬರು ಸ್ನೇಹಿತರಿಗೆ ತಾಗಿದಾಗ ಜಗಳ ಪ್ರಾರಂಭವಾಯಿತು.
ರಿಷಭ್ ಮತ್ತು ಅವರ ಸ್ನೇಹಿತರು ಜಗಳ ಮಾಡುವ ಸಮಯದಲ್ಲಿ ಪಂಕಜ್ ನೆಲಕ್ಕೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಇತರ ಇಬ್ಬರು ಆರೋಪಿಗಳನ್ನು ಮನೋಜ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ.
ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ರಿಷಭ್ ಮತ್ತು ಅವನ ಸ್ನೇಹಿತರು ಶವವನ್ನು ಹತ್ತಿರದ ಕಾಡಿನಲ್ಲಿ ಎಸೆದಿದರು. ನವೆಂಬರ್ ೧೮ ರಂದು ಘಟನೆ ನಡೆದ ಒಂದು ದಿನದ ನಂತರ ಪೊಲೀಸರು ಶವವನ್ನು ವಶಪಡಿಸಿಕೊಂಡಿದ್ದಾರೆ.
ಮೂವರು ಆರೋಪಿಗಳನ್ನು ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ.