ದಲಿತರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತೆ ಬೌದ್ಧರಾಗಬೇಕು: ಕೀರ್ತಿ ಕುಮಾರ್ ಪಡುಬಿದ್ರಿ - Mahanayaka
2:32 PM Thursday 6 - February 2025

ದಲಿತರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತೆ ಬೌದ್ಧರಾಗಬೇಕು: ಕೀರ್ತಿ ಕುಮಾರ್ ಪಡುಬಿದ್ರಿ

ambedkar
07/12/2023

ಪಡುಬಿದ್ರಿ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್  ಅವರಂತೆ ನಾವೂ ಬೌದ್ಧರಾಗಿ ನಮ್ಮಲ್ಲಿನ ಬದಲಾವಣೆಯನ್ನು ಕಂಡುಕೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಪಡುಬಿದ್ರಿ ಶಾಖೆಯ ಸಂಚಾಲಕ ಕೀರ್ತಿಕುಮಾರ್  ಹೇಳಿದ್ದಾರೆ.

ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಪಡುಬಿದ್ರಿ ಶಾಖೆ ವತಿಯಿಂದ ಆಯೋಜಿಸಲಾಗಿದ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಲಿತರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತೆ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಬೇಕು. ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂವಾಗಿ ಸಾಯೋದಿಲ್ಲ ಅಂತ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಲಿತರನ್ನು ಶೂದ್ರತ್ವದಿಂದ ಹೊರತರಲು ದೇಶದ ದಲಿತರನ್ನು ಎಚ್ಚರಿಸುವ ಉದ್ದೇಶದಿಂದ ಭಾರತದಲ್ಲಿ ಹುಟ್ಟಿದ ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮವನ್ನು ಸ್ವೀಕರಿಸುವುದರ ಮೂಲಕ ದಲಿತರಿಗೆ ಬುದ್ಧರ ಧಮ್ಮವನ್ನು ಪರಿಚಯಿಸಿದ್ದಾರೆ ಎಂದರು.

ಶಿವಾನಂದ್ ಪಡುಬಿದ್ರಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಜೀವನದ ಕಷ್ಟದ ದಿನಗಳಲ್ಲೂ ಹೋರಾಟ ಮಾಡಿ ನಮಗೆಲ್ಲ ಸ್ವತಂತ್ರವಾಗಿ ಬದುಕುವ ಹಾಗೆ ಈ ದೇಶಕ್ಕೆ ಸಂವಿಧಾನದಾನ ಮೂಲಕ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಕಲ್ಲಟ್ಟೆ, ಕಾರ್ಯದರ್ಶಿ ಸುರೇಶ್ ಎರ್ಮಾಳ್, ಉಷಾ, ನಯನಾ, ಹರಿಶ್ಚಂದ್ರ, ವಿಠ್ಠಲ್ ನಂದಿಕೂರ್, ಸುಕೇಶ್, ರಮೇಶ್ ಮುಂತಾದವರು ಉಪಸ್ಥಿತರಿದ್ದರು. ಕೋಶಾಧಿಕಾರಿ ವಿಠ್ಠಲ್ ಮಾಸ್ಟರ್  ನಿರೂಪಿಸಿದರು.

ಇತ್ತೀಚಿನ ಸುದ್ದಿ