ರೈಲಿನ ಶೌಚಾಲಯದಲ್ಲಿಯೇ ಯುವತಿಯ ಅತ್ಯಾಚಾರ  | 19 ವರ್ಷದ ಆರೋಪಿ ಪರಾರಿ - Mahanayaka
8:10 AM Friday 20 - September 2024

ರೈಲಿನ ಶೌಚಾಲಯದಲ್ಲಿಯೇ ಯುವತಿಯ ಅತ್ಯಾಚಾರ  | 19 ವರ್ಷದ ಆರೋಪಿ ಪರಾರಿ

15/02/2021

ಥಾಣೆ: ಯುವತಿಯನ್ನು ಮದುವೆಯಾಗುವುದಾಗಿ ಕರೆದುಕೊಂಡು ಹೋದ ಯುವಕನೋರ್ವ ರೈಲಿನ ಶೌಚಾಲಯದಲ್ಲಿ ಆಕೆಯನ್ನು ಅತ್ಯಾಚಾರ ನಡೆಸಿ ಪರಾರಿಯಾದ ಘಟನೆ ಗೋರಖ್‌ ಪುರ ಎಕ್ಸ್‌ ಪ್ರೆಸ್ ರೈಲಿನಲ್ಲಿ ನಡೆದಿದೆ.

ಯುವಕ ಮತ್ತು ಯುವತಿ ಇಬ್ಬರು ಕೂಡ ಮುಂಬೈನ ಕಾಲೇಜೊಂದರಲ್ಲಿ ಓದುತ್ತಿದ್ದರು. ಯುವಕನಿಗೆ 19 ವರ್ಷ ವಯಸ್ಸಾಗಿದ್ದು, ಯುವತಿಯನ್ನು ಮದುವೆಯಾಗುವುದಾಗಿ ಕೂಡ ಆತ ಹೇಳಿದ್ದ.  ಈ ಹಿನ್ನೆಲೆಯಲ್ಲಿ ಇಬ್ಬರು ಕೂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಯುವತಿಯ ಬಳಿಯಲ್ಲಿ 2 ಲಕ್ಷ ರೂಪಾಯಿ ಕೂಡ ಇತ್ತು ಎನ್ನಲಾಗಿದೆ.

ರೈಲಿನ ಶೌಚಾಲಯದಲ್ಲಿ ಅತ್ಯಾಚಾರ ನಡೆಸಿದ ಬಳಿಕ ಯುವಕ ರೈಲಿನಿಂದ ಕೆಳಗಿಳಿದಿದ್ದಾನೆ. ಟಿಕೆಟ್ ಕಲೆಕ್ಟರ್ ಟಿಕೆಟ್ ಕೇಳಲು ಬಂದಾಗ ಯುವತಿ ಕೂಡ ರೈಲಿನಿಂದ ಇಳಿದು ಆರೋಪಿಯನ್ನು ಕರೆದಿದ್ದಾಳೆ.  ”ನೀನು ರೈಲಿನಲ್ಲಿ ಹೋಗುತ್ತಿರು. ನಾನು ಜಾಯಿನ್ ಆಗುತ್ತೇನೆ” ಆತ ಈ ವೇಳೆ ಹೇಳಿದ್ದಾನೆ. ಆ ಬಳಿಕ ಆತ ರೈಲಿಗೆ ಹತ್ತಿಲ್ಲ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.


Provided by

ಘಟನೆಯ ಬಳಿಕ ಯುವತಿ ತನ್ನ ಪೋಷಕರಿಗೆ ಕರೆ ಮಾಡಿದ್ದು, ಪೋಷಕರು ಮುಂಬೈ ಕುರಾರ್ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಅವರು ಥಾಣೆ ಪೊಲೀಸರಿಗೆ ದೂರು ವರ್ಗಾಯಿಸಿದ್ದಾರೆ. ಆದರೆ ಆರೋಪಿಯನ್ನು ಈವರೆಗೆ ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ