ಆಟವಾಡುತ್ತಿದ್ದ ಬಾಲಕ ಕೆಲವೇ ಕ್ಷಣಗಳಲ್ಲಿ ಸಾವು | ಬಾಲಕನ ಸಾವಿಗೆ ಕಾರಣವಾಯ್ತು ಆವರಣ ಗೋಡೆ! - Mahanayaka
10:23 PM Thursday 12 - December 2024

ಆಟವಾಡುತ್ತಿದ್ದ ಬಾಲಕ ಕೆಲವೇ ಕ್ಷಣಗಳಲ್ಲಿ ಸಾವು | ಬಾಲಕನ ಸಾವಿಗೆ ಕಾರಣವಾಯ್ತು ಆವರಣ ಗೋಡೆ!

15/02/2021

ಕಾಸರಗೋಡು: ಆಟವಾಡುತ್ತಿದ್ದ ಬಾಲಕ ಆವರಣ ಗೋಡೆಯನ್ನು ಹತ್ತಿದ್ದು, ಈ ವೇಳೆ ಕಲ್ಲು ದೇಹದ ಮೇಲೆ ಬಿದ್ದು ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನೀಲೇಶ್ವರ ಸಮೀಪದ ಚಾಯೋತ್ ನಲ್ಲಿ ನಡೆದಿದೆ.

ಚಾಯೋತ್ ಚೆಕ್ಲಿಯ ಕಾಲನಿಯ ರಮೇಶ್ ಎಂಬವರ 12 ವರ್ಷದ ಬಾಲಕ ರಿತಿನ್(12) ಮೃತಪಟ್ಟ ಬಾಲಕನಾಗಿದ್ದಾನೆ. ಆಟವಾಡುತ್ತಿದ್ದ ಬಾಲಕ ಆವರಣ ಗೋಡೆಯನ್ನು ಹತ್ತಲು ಪ್ರಯತ್ನಿಸಿದ್ದಾನೆ. ಈ ವೇಳೇ ಅವರಣದಲ್ಲಿದ್ದ ಕಲ್ಲು ಬಾಲಕನ ಮೇಲೆ ಬಿದ್ದಿದೆ.

ಕಲ್ಲು ಮೈಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು  ಕಣ್ಣೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ದಾರಿ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ. ಮೃತ ಬಾಲಕ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

ಇತ್ತೀಚಿನ ಸುದ್ದಿ