ಐಶಾರಾಮಿ ಕಾರು ಹೊಂದಿದವರು ರೈತರಾ? ಅನ್ನೋ ಕಾಲ ಹೋಯ್ತು! | ಇಲ್ಲಿ ನೋಡಿ ಈ ರೈತ ಹೆಲಿಕಾಫ್ಟರ್ ಮಾಲಿಕ
ಮಹಾರಾಷ್ಟ್ರ: ರೈತರ ಪ್ರತಿಭಟನೆ ದೇಶದಲ್ಲಿ ಚರ್ಚೆಗೀಡಾಗುತ್ತಿರುವ ಸಂದರ್ಭದಲ್ಲಿ, ರೈತ ಮುಖಂಡ ರಾಕೇಶ್ 80 ಕೋಟಿ ಮಾಲಿಕ, ರೈತ ಮುಖಂಡರಲ್ಲಿ ಆಡಿ ಕಾರ್ ಇದೆ, ಇವರೆಲ್ಲ ಶ್ರೀಮಂತರು ಇವರೆಲ್ಲ ರೈತರೇ ಎಂಬಂತಹ ಪ್ರಶ್ನೆಗಳನ್ನು ಸರ್ಕಾರದ ಪರವಿರುವವರು ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದ್ದರು. ಆದರೆ, ಇಲ್ಲೊಬ್ಬ ರೈತ ಹೆಲಿಕಾಫ್ಟರ್ ಮಾಲಿಕರಾಗಿದ್ದಾರೆ. ಹೆಲಿಕಾಫ್ಟರ್ ಹೊಂದಿರುವವರು ರೈತರೇ? ಎಂದು ನೀವು ಕೇಳುವ ಹಾಗಿಲ್ಲ, ಯಾಕೆಂದರೆ, ಈ ರೈತ ನಿಜವಾಗಿಯೂ ಹೆಲಿಕಾಫ್ಟರ್ ವೊಂದರ ಮಾಲಿಕರಾಗಿದ್ದಾರೆ.
ಮಹಾರಾಷ್ಟ್ರದ ಭಿವಾಂಡಿಯ ರೈತ ಜನಾರ್ಧನ್ ಬೋಯಿರ್ ಅವರೇ ಹೆಲಿಕಾಫ್ಟರ್ ಖರೀದಿಸಿರುವ ರೈತ. ಜನಾರ್ದನ್ ಅವರು ತಮ್ಮ ಹಾಲು ಉತ್ಪನ್ನಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ಭಾಗಗಳಿಗೆ ಹೋಗಬೇಕಾಗುತ್ತದೆ. ಈ ಕಾರಣಕ್ಕಾಗಿ ಅವರು ಈ ಹೆಲಿಕಾಫ್ಟರ್ ಖರೀದಿಸಿದ್ದಾರೆ.
ಪಂಜಾಬ್ , ಗುಜರಾತ್, ಹರಿಯಾಣ, ರಾಜಸ್ಥಾನ ಮೊದಲಾದ ರಾಜ್ಯಗಳಿಗೆ ಜನಾರ್ದನ್ ಭೋಯಿರ್ ಪ್ರಯಾಣಿಸುತ್ತಾರೆ. ಈ ರಾಜ್ಯಗಳಲ್ಲಿ ಇವರು ಕೃಷಿ ಮತ್ತು ಹಾಲು ವ್ಯಾಪಾರ ನಡೆಸುತ್ತಾರೆ. ಜನಾರ್ದನ್ ಭೋಯಿರ್ ಅವರು ತಮ್ಮ ಮನೆಯ ಸಮೀಪ ಹೆಲಿಪ್ಯಾಡ್ ನಿರ್ಮಿಸಿದ್ದಾರೆ. ಅವರಿಗೆ ಮಾರ್ಚ್ 15ರಂದು ಹೆಲಿಕಾಫ್ಟರ್ ಸಿಗಲಿದೆ. ಕೃಷಿಯ ಜೊತೆಗೆ ಭೋಯಿರ್ ರಿಯಲ್ ಎಸ್ಟೇಟ್ ಕೂಡ ನಡೆಸುತ್ತಿದ್ದಾರೆ. ಅನೇಕ ಗೋದಾಮುಗಳನ್ನು ಕೂಡ ಹೊಂದಿದ್ದಾರೆ. ಇವುಗಳಿಗೆ ಬಾಡಿಗೆಯೇ ಬಹಳಷ್ಟು ಬರುತ್ತಿದೆ.