ರಾಕಿಂಗ್ ಸ್ಟಾರ್ ಯಶ್  ಹುಟ್ಟುಹಬ್ಬಕ್ಕೆ ಕಟೌಟ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ಶಾಕ್: ಮೂವರು ಸಾವು, ಮೂವರಿಗೆ ಗಂಭೀರ ಗಾಯ - Mahanayaka

ರಾಕಿಂಗ್ ಸ್ಟಾರ್ ಯಶ್  ಹುಟ್ಟುಹಬ್ಬಕ್ಕೆ ಕಟೌಟ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ಶಾಕ್: ಮೂವರು ಸಾವು, ಮೂವರಿಗೆ ಗಂಭೀರ ಗಾಯ

yash fans
08/01/2024

ಗದಗ:   ರಾಕಿಂಗ್ ಸ್ಟಾರ್ ಯಶ್  ಹುಟ್ಟುಹಬ್ಬಕ್ಕೆ ಶುಭಕೋರಿ ಕಟೌಟ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಮೂವರು  ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.

ಇನ್ನೂ ಇದೇ ದುರಂತದಲ್ಲಿ ಇನ್ನಿತರ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಮೂವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಹನುಮಂತ ಹರಿಜನ್, ಮುರಳಿ ನಡವಿನಮನಿ  ಮತ್ತು ನವೀನ್ ಗಾಜಿ ಮೃತಪಟ್ಟವರು ಎಂದು ತಿಳಿದು ಬಂದಿದೆ.  ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯಶ್ ಫೋಟೋ ಹೊಂದಿದ್ದ ಕಟೌಟ್ ನಿಲ್ಲಿಸಲು ಯುವಕರು ಮುಂದಾಗಿದ್ದರು.

ರಾತ್ರೋರಾತ್ರಿ ಯಶ್ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ತೀರ್ಮಾನಿಸಿದ್ದರು.   ಬೃಹತ್ ಬ್ಯಾನರ್ ನಿಲ್ಲಿಸುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿ