ಪ್ರೊಫೆಸರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ: ಸಿಎಂಗೆ ಪತ್ರ ಬರೆದ 500ಕ್ಕೂ ಅಧಿಕ ವಿದ್ಯಾರ್ಥಿನಿಯರು - Mahanayaka

ಪ್ರೊಫೆಸರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ: ಸಿಎಂಗೆ ಪತ್ರ ಬರೆದ 500ಕ್ಕೂ ಅಧಿಕ ವಿದ್ಯಾರ್ಥಿನಿಯರು

haryana news
08/01/2024

ಗುರುಗಾಂವ್(ಹರ್ಯಾಣ): ಪ್ರೊಫೆಸರ್ ವೊಬ್ಬರು ತಮ್ಮ ಚೇಂಬರ್ ಗೆ ಕರೆದು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸುಮಾರು 500 ವಿದ್ಯಾರ್ಥಿನಿಯರು ಹರ್ಯಾಣ ಸಿಎಂ ಹಾಗೂ ಅಲ್ಲಿನ ರಾಜ್ಯಪಾಲರು ಮತ್ತು ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಈ ಪ್ರೊಫೆಸರ್ ಮೇಲೆ ಇದೇ ಮೊದಲ ಬಾರಿಯಲ್ಲ, ಈ ಹಿಂದೆಯೂ ಲೈಂಗಿಕ ಕಿರುಕುಳದ ಬಗ್ಗೆ ಪತ್ರಗಳು ಬಂದಿದ್ದವು. ಇದು ನಾಲ್ಕನೇ ಬಾರಿಗೆ ಲೈಂಗಿಕ ಕಿರುಕುಳದ ಬಗ್ಗೆ ಪತ್ರ ಬಂದಿದೆ. ಸಿರ್ಸಾದ ಚೌಧರಿ ದೇವಿಲಾಲ್ ವಿಶ್ವವಿದ್ಯಾನಿಲಯದಲ್ಲಿ ಇಂತಹದ್ದೊಂದು ಗಂಭೀರ ಪ್ರಕರಣ ಪತ್ತೆಯಾಗಿದೆ.
ಈವರೆಗೆ ಪ್ರೊಫೆಸರ್ ಮೇಲೆ ಕೇಳಿ ಬಂದಿರುವ ಆರೋಪದ ಬಗ್ಗೆ ವಿಶ್ವವಿದ್ಯಾನಿಲಯದ ಆಂತರಿಗೆ ದೂರು ಸಮಿತಿ ಎರಡು ಬಾರಿ ಪ್ರೊಫೆಸರ್ ಗೆ ಕ್ಲೀನ್ ಚಿಟ್ ನೀಡಿದೆ. ಪ್ರಾಥಮಿಕ ತನಿಖೆ ನಡೆಸಿದ ಬಳಿಕವೇ ಎಫ್ ಐಆರ್ ದಾಖಲಿಸಲು ಸಾಧ್ಯ ಎಂದು ಎಎಸ್ ಪಿ ದೀಪ್ತಿ ಗರ್ಗ್ ಹೇಳಿದ್ದಾರೆ.

ಆರೋಪಿ ಪ್ರೊಫೆಸರ್ ತನ್ನ ವಿರುದ್ಧದ ಆರೋಪಗಳು ರಾಜಕೀಯ ದುರುದ್ದೇಶದ ಆರೋಪಗಳು ಎಂದಿದ್ದಾನೆ. ಪ್ರೊಫೆಸರ್ ವಿರುದ್ಧ ಬರೆಯಲಾಗಿರುವ ಪತ್ರ ಕೂಡ ಖೈರ್ ಪುರ ಅಂಚೆ ಕಚೇರಿಯಿಂದ ಪೋಸ್ಟ್ ಆಗಿವೆ. ಕಳೆದ ವರ್ಷವೂ ಈ ರೀತಿಯ ಆರೋಪಗಳು ಕೇಳಿ ಬಂದಿದ್ದವು. ಆದರೆ ಪ್ರೊಫೆಸರ್ ವಿರುದ್ಧದ ಆರೋಪಕ್ಕೆ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಹೀಗಾಗಿ ಕ್ಲೀನ್ ಚಿಟ್ ನೀಡಲಾಗಿತ್ತು.

ಪ್ರೊಫೆಸರ್ ನಮ್ಮನ್ನು ತಮ್ಮ ಕಚೇರಿಯ ವಾಶ್ ರೂಂಗೆ ಕರೆದೊಯ್ದು ಅಸಭ್ಯವಾಗಿ ಸ್ಪರ್ಶಿಸುತ್ತಾರೆ, ಅವರ ಕೃತ್ಯವನ್ನು ವಿರೋಧಿಸಿದ್ರೆ ಬೆದರಿಕೆ ಹಾಕುತ್ತಾರೆ, ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನೂ ಅವರು ನಾಶ ಪಡಿಸುತ್ತಿದ್ದಾರೆ ಎಂದು ಪತ್ರದಲ್ಲಿ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇಷ್ಟೊಂದು ಗಂಭೀರವಾದ ಆರೋಪಗಳು ಕೇಳಿ ಬಂದರೂ, ಕಾಲೇಜು ಆಡಳಿತ ಮಂಡಳಿ ಪುರಾವೆ ಇಲ್ಲ ಎಂಬ ಕಾರಣ ನೀಡಿ ಪ್ರತಿ ಬಾರಿಯೂ ಆರೋಪಿಗೆ ಕ್ಲೀನ್ ಚಿಟ್ ನೀಡುತ್ತಿದೆ.

ಇತ್ತೀಚಿನ ಸುದ್ದಿ