ಬೈಕ್ ನಲ್ಲಿ ಹೋಗುತ್ತಿದ್ದ ವೇಳೆಯೇ ಗುಂಡಿನ ದಾಳಿ: ಬಿಜೆಪಿ ಮುಖಂಡನ ಬರ್ಬರ ಹತ್ಯೆ - Mahanayaka

ಬೈಕ್ ನಲ್ಲಿ ಹೋಗುತ್ತಿದ್ದ ವೇಳೆಯೇ ಗುಂಡಿನ ದಾಳಿ: ಬಿಜೆಪಿ ಮುಖಂಡನ ಬರ್ಬರ ಹತ್ಯೆ

aseem roy
08/01/2024

ಕಂಕೇರ್: ಬಿಜೆಪಿ ಮುಖಂಡರೊಬ್ಬರನ್ನು ಭೀಕರವಾಗಿ  ಹತ್ಯೆ ಮಾಡಿರುವ ಘಟನೆ ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ.

ಅಸೀಮ್ ರಾಯ್  ಹತ್ಯೆಗೀಡಾದ ಬಿಜೆಪಿ ಮುಖಂಡರಾಗಿದ್ದಾರೆ. ಪಖಂಜೂರ್ ಪಟ್ಟಣದ ಪುರಾಣ ಬಜಾರ್ ಪ್ರದೇಶದಲ್ಲಿ ರಾತ್ರಿ 8:30 ರ ಸುಮಾರಿಗೆ ಅಸೀಮ್ ರೈ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಪರಿಚಿತರು ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ದ್ವಿಚಕ್ರದಲ್ಲಿ ಹೋಗುತ್ತಿದ್ದ ರಾಯ್ ಏಕಾಏಕಿ ಬಿದ್ದಿದ್ದಾರೆ. ಅವರನ್ನು  ಆಸ್ಪತ್ರೆಗೆ ಸಾಗಿಸಲಾಯಿತಾದರೂ  ಅದಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ.

ಮೃತದೇಹದ ಪ್ರಾಥಮಿಕ ಪರೀಕ್ಷೆಯಲ್ಲಿ ರಾಯ್ ಅವರ ತಲೆಗೆ ಗುಂಡು ಬಿದ್ದಿರುವುದನ್ನು ವೈದ್ಯರು ದೃಢಪಡಿಸಿದ್ದು, ಶವಪರೀಕ್ಷೆಯ ನಂತರ ಈ ಬಗ್ಗೆ ವಿವರವಾದ ವರದಿ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಮೃತ ಅಸೀಮ್ ರಾಯ್  ಅವರು ಪಾಖಂಜೂರು ನಗರ ಪಂಚಾಯತ್ ಮಾಜಿ ಅಧ್ಯಕ್ಷ ರಾಯ್, ಹಾಲಿ ಕಾಪೆರ್ರೇಟರ್ ಮತ್ತು ಆಡಳಿತಾರೂಢ ಬಿಜೆಪಿಯ ಕಂಕೇರ್ ಜಿಲ್ಲೆ ಘಟಕದ ಉಪಾಧ್ಯಕ್ಷರಾಗಿದ್ದರು.

ಇತ್ತೀಚಿನ ಸುದ್ದಿ