ರಸ್ತೆ ಬದಿಯಲ್ಲಿ ಪಂಚಾಯತ್ ಸದಸ್ಯೆಯ ಮೃತದೇಹ ಪತ್ತೆ!

08/01/2024
ಕಾಸರಗೋಡು: ಪಂಚಾಯತ್ ಸದಸ್ಯರೊಬ್ಬರ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿರುವ ಘಟನೆ ಕಾಸರಗೋಡಿನ ಮೊಗ್ರಾಲ್ ಪುತ್ತೂರು ಬಳಿಯಲ್ಲಿ ನಡೆದಿದೆ.
ಮೊಗ್ರಾಲ್ ಪುತ್ತೂರು ಪಂಚಾಯತ್ ನ 3ನೇ ವಾರ್ಡ್ ನ ಸದಸ್ಯೆ ಪುಷ್ಪಾ(45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೊಗ್ರಾಲ್ ಪುತ್ತೂರು ಕೋಟೆಗುಡ್ಡೆ ಸಮೀಪ ಅವರ ಮೃತದೇಹ ಪತ್ತೆಯಾಗಿದೆ.
ಪುಷ್ಪಾ ಅವರು ಬಿದ್ದಿರುವುದನ್ನು ಕಂಡ ಸ್ಥಳೀಯರೊಬ್ಬರು ಕೂಡಲೇ ನೆರೆಹೊರೆಯವರ ನೆರವಿನೊಂದಿಗೆ ಆಟೋವೊಂದರ ಮೂಲಕ ಕಾಸರಗೋಡಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ಪುಷ್ಪಾ ಅವರು ಅದಾಗಲೇ ಮೃತಪಟ್ಟಿದ್ದರು.
ಸಂಬಂಧಿಕರ ಮನೆಗೆಂದು ತೆರಳಿದ್ದ ಪುಷ್ಪಾ ಅವರು ರಸ್ತೆ ಬದಿಯಲ್ಲಿ ಸಾವನ್ನಪ್ಪಲು ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ, ಮೃತದೇಹವನ್ನು ಕಾಸರಗೋಡು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.