ಕಾರಿನಲ್ಲಿ ಕುಳಿತಿದ್ದ ಮಹಿಳೆ ಮುಂದೆ ವಿಕೃತಿ  ಪ್ರದರ್ಶಿಸಿದ ಕಾಮುಕ: ಕಿಡಿಗೇಡಿಯ ಬಂಧನಕ್ಕಾಗಿ ತನಿಖೆ ಆರಂಭಿಸಿದ ಪೊಲೀಸರು - Mahanayaka

ಕಾರಿನಲ್ಲಿ ಕುಳಿತಿದ್ದ ಮಹಿಳೆ ಮುಂದೆ ವಿಕೃತಿ  ಪ್ರದರ್ಶಿಸಿದ ಕಾಮುಕ: ಕಿಡಿಗೇಡಿಯ ಬಂಧನಕ್ಕಾಗಿ ತನಿಖೆ ಆರಂಭಿಸಿದ ಪೊಲೀಸರು

bangalore
09/01/2024

ಬೆಂಗಳೂರು:  ಕಾರಿನಲ್ಲಿ ಕುಳಿತಿದ್ದ ಮಹಿಳೆಯ ಜೊತೆಗೆ ವ್ಯಕ್ತಿಯೋರ್ವ ಅನುಚಿತ ವರ್ತನೆ ಮಾಡಿರುವ ಘಟನೆ ಮಹದೇವಪುರದ ಬಾಗಮನೆ ಕಾನ್ಸ್ಟೆಲೇಷನ್ ಬ್ಯುಸಿನೆಸ್ ಪಾರ್ಕ್ ನಲ್ಲಿ ನಡೆದಿದೆ.


Provided by

ಬೆಂಗಳೂರು ಮೂಲದ ಮಹಿಳೆಯೊಬ್ಬರು ಬ್ಯುಸಿನೆಸ್ ಪಾರ್ಕ್‌ ಬಳಿ ಕಾರಿನೊಳಗೆ ಕುಳಿತಿದ್ದಾಗ ವ್ಯಕ್ತಿಯೋರ್ವ ಅಶ್ಲೀಲ ಸನ್ನೆ ಮತ್ತು ಹಸ್ತಮೈಥುನ ಮಾಡುವ ಮೂಲಕ  ಮಹಿಳೆಗೆ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ.

ಜನವರಿ 5 ರಂದು ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.  ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆ ಮಹದೇವಪುರ ಪೊಲೀಸರಿಗೆ  ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ.


Provided by

ವ್ಯಕ್ತಿಯ ಕೃತ್ಯದಿಂದ ಭಯಭೀತವಾದ ಮಹಿಳೆ ಕಾರನ್ನು ಲಾಕ್ ಮಾಡಿಕೊಂಡು ಕುಳಿತಿದ್ದು, ಈ ವೇಳೆ ವ್ಯಕ್ತಿ ಹಲವು ಬಾರಿ ಕಾರಿಗೆ ಸುತ್ತು ಹಾಕಿದ್ದು, ಕಾರ್ರ್ ಕಿಟಕಿ ಬಳಿಗೆ ಬಂದು ಅಶ್ಲೀಲ ಸನ್ನೆ ಮತ್ತು ಕೃತ್ಯಗಳ ಮೂಲಕ ಕಿರುಕುಳ ನೀಡಿದ್ದಾನೆ. ಮಹಿಳೆಯ ಕಾರಿಗೆ ಅಡ್ಡವಾಗಿ ಇನ್ನೊಂದು ಕಾರು ನಿಂತಿದ್ದರಿಂದಾಗಿ ಮಹಿಳೆ ಕಾರನ್ನು ಚಲಾಯಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ಸುಮಾರು 10 ನಿಮಿಷಗಳ ನಂತರ ಮಹಿಳೆಯ ಸ್ನೇಹಿತರಿಬ್ಬು ಬಂದಿದ್ದು, ಈ ವೇಳೆ ತನ್ನ ಕಾರಿನಿಂದ ಹೊರ ಬಂದು ಮಹಿಳೆ ಅವರ ಕಾರಿಗೆ ಹತ್ತಿದ್ದಾರೆ.  ಬಳಿಕ ಪಾರ್ಕ್ ನಲ್ಲಿ ಆತನಿಗಾಗಿ ಹುಡುಕಾಡಿದರೂ ಆತ ಕಾಣಲಿಲ್ಲ ಎಂದು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ