ವಿವಾದಿತ ಮಂದಿರಕ್ಕೆ ಹಣ ನೀಡಲ್ಲ ಎಂದು ಹೇಳಿದ್ದೇನೆ | ದೇಣಿಗೆ ಸಂಗ್ರಹದ ವಿರುದ್ಧ ಸಿದ್ದರಾಮಯ್ಯ ಹೇಳಿಕೆ - Mahanayaka
10:59 PM Wednesday 11 - December 2024

ವಿವಾದಿತ ಮಂದಿರಕ್ಕೆ ಹಣ ನೀಡಲ್ಲ ಎಂದು ಹೇಳಿದ್ದೇನೆ | ದೇಣಿಗೆ ಸಂಗ್ರಹದ ವಿರುದ್ಧ ಸಿದ್ದರಾಮಯ್ಯ ಹೇಳಿಕೆ

16/02/2021

ದೆಹಲಿ:  ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ದೇಣಿಗೆ ಕೇಳಲು ನನ್ನ ಬಳಿಯೂ ಬಂದಿದ್ದರು. ಆದರೆ, ವಿವಾದಿತ ಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ ಎಂದು ಹೇಳಿ ಕಳುಹಿಸಿದೆ ಎಂದು ವಿಪಕ್ಷ ನಾಐಕ ಸಿದ್ದರಾಮಯ್ಯ ಹೇಳಿದ್ದಾರೆ.

ರಾಮಮಂದಿರವನ್ನು ಬೇರೆ ಕಡೆಯಲ್ಲಿ ಕಟ್ಟಿರುತ್ತಿದ್ದರೆ ದೇಣಿಗೆ ನೀಡುತ್ತಿದ್ದೆ ಎಂದು ಹೇಳಿರುವ ಸಿದ್ದರಾಮಯ್ಯ, ರಾಮಮಂದಿರಕ್ಕೆ ಎಷ್ಟು ಹಣ ಸಂಗ್ರವಾಗಿದೆ ಎಂದು ಯಾರಾದರೂ ಹಣಕ್ಕೆ ಲೆಕ್ಕ ಕೊಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆಯೂ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಹಣ, ಇಟ್ಟಿಗೆ ಸಂಗ್ರಹಿಸಿದ್ದರು. ಸಂಗ್ರಹಿಸಿದ ಇಟ್ಟಿಗೆಗಳನ್ನು ಊರಿನಿಂದ ಆಚೆ ಎಸೆದು ಹಣ ತೆಗೆದುಕೊಂಡು ಹೋಗಿದ್ದರು ಎಂದು ಸಿದ್ದರಾಮಯ್ಯ ಮಂದಿರಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರವಾಗಿ ಹೇಳಿಕೆ ನೀಡಿದ್ದಾರೆ.

 

ಇತ್ತೀಚಿನ ಸುದ್ದಿ