ಶ್ರೀರಾಮನ ಪರಮ ಭಕ್ತರಂತೆ ಸಚಿವ ಕೆ.ಎಚ್.ಮುನಿಯಪ್ಪ‌: “ಶ್ರೀರಾಮ” ಅಂತ  1080 ಬಾರಿ ಬರೆಯುತ್ತಾರಂತೆ! - Mahanayaka

ಶ್ರೀರಾಮನ ಪರಮ ಭಕ್ತರಂತೆ ಸಚಿವ ಕೆ.ಎಚ್.ಮುನಿಯಪ್ಪ‌: “ಶ್ರೀರಾಮ” ಅಂತ  1080 ಬಾರಿ ಬರೆಯುತ್ತಾರಂತೆ!

k h muniyappa
12/01/2024

ಕೋಲಾರ: ನಾನು ರಾಮನ ಪರಮ ಭಕ್ತ, ಸುಮಾರು 20 ವರ್ಷಗಳಿಂದಲೂ ರಾಮಕೋಟಿ ಬರೆಯುತ್ತೇನೆ ಎಂದೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ‌ ಗುರುವಾರ ಹೇಳಿಕೆ ನೀಡಿದ್ದಾರೆ.

ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಮುನಿಯಪ್ಪ ಅಚ್ಚರಿಯ ಹೇಳಿಕೆ ನೀಡಿದ್ದು, ಬಾಲ್ಯದಿಂದಲೂ ರಾಮನನ್ನು ಆರಾಧಿಸುತ್ತಿದ್ದೇನೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 108 ಬಾರಿ “ಶ್ರೀ ರಾಮ” ಎಂದು ಬರೆಯುತ್ತೇನೆ. ಸಮಯ ಸಿಕ್ಕಾಗ 1080 ಬಾರಿ ಶ್ರೀರಾಮ ಎಂದು ಬರೆಯುತ್ತೇನೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಕೆ.ಎಚ್.ಮುನಿಯಪ್ಪ‌, ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅವರು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.


Provided by

ದೇಶದ ಹಲವಾರು ಪ್ರಮುಖ ಮಠಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಹಾಜರಾಗಲು ನಿರಾಕರಿಸಿದ್ದಾರೆ. ಏಕೆಂದರೆ ಶಾಸ್ತ್ರಗಳನ್ನು ಅನುಸರಿಸಿ ಕಾರ್ಯಕ್ರಮವನ್ನು ನಡೆಸುತ್ತಿಲ್ಲ. ದೇವಾಲಯದ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ದೇವಸ್ಥಾನದ ಶಂಕುಸ್ಥಾಪನೆ ಸಮಾರಂಭವನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.

ಇನ್ನೂ ಕೆ.ಎಚ್.ಮುನಿಯಪ್ಪ‌ ಅವರ ರಾಮ ಭಕ್ತಿಯ ಕುರಿತು ಪ್ರತಿಕ್ರಿಯಿಸಿರುವ ಸಚಿವರ ಪತ್ನಿ ನಾಗರತಿನಮ್ಮ, ಎಷ್ಟು ಬಾರಿ ಶ್ರೀರಾಮ ಎಂದು ಬರೆದಿದ್ದಾರೆಂಬುದನ್ನು ಲೆಕ್ಕ ಹಾಕಿಲ್ಲ, ರಾಮಕೋಟಿ ಬರೆಯಲು ಯಾವಾಗಲೂ ಪುಸ್ತಕವನ್ನು ತರುತ್ತಾರೆ. ಪ್ರಯಾಣಿಸುವ ಸಂದರ್ಭದಲ್ಲಿ ಸೂಟ್‌ ಕೇಸ್‌ ನಲ್ಲಿ ಪುಸ್ತಕ ಇಟ್ಟುಕೊಂಡಿರುತ್ತಾರೆಂದು ತಿಳಿಸಿದರು.

ಇತ್ತೀಚಿನ ಸುದ್ದಿ