ಅರ್ಜುನನ ಸಾವಿನ ನಂತರ ಕಾರ್ಯಾಚರಣೆಗಿಳಿದ ಅಭಿಮಾನ್ಯು: ಸಾರಾ ಮಾರ್ಟಿನ್ ಎಂಬ ಕಾಡಾನೆ ಸೆರೆ - Mahanayaka

ಅರ್ಜುನನ ಸಾವಿನ ನಂತರ ಕಾರ್ಯಾಚರಣೆಗಿಳಿದ ಅಭಿಮಾನ್ಯು: ಸಾರಾ ಮಾರ್ಟಿನ್ ಎಂಬ ಕಾಡಾನೆ ಸೆರೆ

abhimanyu elephant
14/01/2024

ಹಾಸನ: ದಸರಾ ಆನೆ ಕ್ಯಾಪ್ಟನ್ ಅರ್ಜುನನ ಮರಣದ ಬೆನ್ನಲ್ಲೇ ಇದೀಗ ಕ್ಯಾಪ್ಟನ್ ಅಭಿಮಾನ್ಯು ಆನೆಯ ನೇತೃತ್ವದಲ್ಲಿ ಮತ್ತೆ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಿದ್ದು, ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ಭೀತಿ ಸೃಷ್ಟಿಸಿದ್ದ ಸಾರಾ ಮಾರ್ಟಿನ್ ಎಂಬ ಹೆಸರಿನ ಆನೆಯನ್ನು ಸೆರೆ ಹಿಡಿಯಲಾಗಿದೆ.

ಅರ್ಜುನ ಆನೆಯ ಸಾವಿನ ನಂತರ ಕಾಡಾನೆಗಳನ್ನು ಸೆರೆ ಹಿಡಿಯಲು ಸತತ ಒತ್ತಡಗಳು ಕೇಳಿ ಬಂದಿದ್ದವು. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಮತ್ತು ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಸಾರಾ ಮಾರ್ಟಿನ್ ಕಾಡಾನೆ ಭೀತಿ ಸೃಷ್ಟಿತ್ತು. ಹೀಗಾಗಿ ಅಭಿಮಾನ್ಯು ಆನೆ ನೇತೃತ್ವದ  ಸುಗ್ರೀವ, ಧನಂಜಯ, ಪ್ರಶಾಂತ, ಭೀಮಾ, ಹರ್ಷ, ಅಶ್ವಥ್ಥಾಮ, ಮಹೇಂದ್ರ ಒಟ್ಟು 8 ಆನೆಗಳ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಸಾರಾ ಮಾರ್ಟಿನ್ ನನ್ನು ಬಂಧಿಸಲಾಗಿದೆ.

ಆನೆ ಸೆರೆಗೆ ಜನವರಿ12ರಿಂದ ಬೇಲೂರು ತಾಲ್ಲೂಕು ಬಿಕ್ಕೋಡು ಗ್ರಾಮದಲ್ಲಿ ಕಾರ್ಯಾಚರಣೆ ಆರಂಭವಾಗಿತ್ತು. ಶನಿವಾರ ಬೆಳಿಗ್ಗೆ ಅರಣ್ಯ ಇಲಾಖೆ ಉಪ ನಿರ್ದೇಶಕ ಸೌರಭ್ ಕುಮಾರ್ ನೇತೃತ್ವದಲ್ಲಿ, ತಾಲ್ಲೂಕಿನ ಪಾಳ್ಯ ಹೋಬಳಿ ನಲ್ಲೂರು ಹಾಗೂ ಮುದ್ದನಾಯ್ಕನಹಳ್ಳಿಪುರ ಗ್ರಾಮಕ್ಕೆ ಸೇರಿದ ಸಹರಾ ಎಸ್ಟೇಟ್‍ ನಲ್ಲಿ ಪ್ರಾರಂಭಿಸಲಾಯಿತು.

ಕೊಡಗು ಜಿಲ್ಲೆಯ ದುಬಾರೆ ಹಾಗೂ ಮತ್ತಿಗೋಡಿನಿಂದ ಬಂದಿದ್ದ ದಸರಾ ಆನೆ ಅಭಿಮನ್ಯು, ಸುಗ್ರೀವ, ಧನಂಜಯ, ಪ್ರಶಾಂತ, ಭೀಮಾ, ಹರ್ಷ, ಅಶ್ವಥ್ಥಾಮ ಮತ್ತು ಮಹೇಂದ್ರ ಎಂಬ ಎಂಟು ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.

ಇತ್ತೀಚಿನ ಸುದ್ದಿ