ಕಾರು- ಬೈಕ್  ನಡುವೆ ಭೀಕರ ಅಪಘಾತ: ಬೈಕ್ ಸವಾರ ಸಾವು - Mahanayaka
3:38 PM Saturday 22 - February 2025

ಕಾರು– ಬೈಕ್  ನಡುವೆ ಭೀಕರ ಅಪಘಾತ: ಬೈಕ್ ಸವಾರ ಸಾವು

bike
18/01/2024

ಮಂಗಳೂರು:  ನಗರದ ಹೊರವಲಯದ ಕಾವೂರು ಜಂಕ್ಷನ್ ನಲ್ಲಿ ಕಾರು ಹಾಗೂ ಬೈಕ್ ನ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಬೈಕ್ ಸವಾರ ಕೆಐಒಸಿಎಲ್ ಉದ್ಯೋಗಿ ಶೇಖರಪ್ಪ(54) ಮೃತಪಟ್ಟವರಾಗಿದ್ದು, ಕೆಲಸ ಮುಗಿಸಿ ಕ್ವಾಟ್ರಸ್ ಕಡೆಗೆ ಹೊರಟಿದ್ದ ವೇಳೆ ಮುಖ್ಯಗೇಟಿನ ಬಳಿಯಲ್ಲಿ ಕಾರು ಬೈಕ್ ಗೆ ಡಿಕ್ಕಿ ಹೊಡೆದಿತ್ತು.

ತಡ ರಾತ್ರಿ 11:25ರ ವೇಳೆಗೆ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ