ಈ ಬೆಕ್ಕಿಗೆ ಬ್ರಿಟನ್ ಪ್ರಧಾನಿ ಕಚೇರಿಯಲ್ಲಿ ಸಿಕ್ಕಿದೆ ಅತ್ಯುನ್ನತ ಹುದ್ದೆ!
ಬ್ರಿಟನ್: ಬ್ರಿಟನ್ ಪ್ರಧಾನಿಯ ಕಚೇರಿಯಲ್ಲಿರುವ “ಲ್ಯಾರಿ ದ ಕ್ಯಾಟ್ “ ಇದೀಗ 10 ವರ್ಷಗಳನ್ನು ಪೂರೈಸಿದ್ದು, 2011 ರಲ್ಲಿ ಅಂದಿನ ಪ್ರಧಾನಿ ಜೇಮ್ಸ್ ಕ್ಯಾಮರೂನ್ ತಮ್ಮ ಕಚೇರಿಯಲ್ಲಿ ಇಲಿಗಳ ಕಾಟ ತಾಳಲಾರದೇ ಲ್ಯಾರಿ ದ ಕ್ಯಾಟ್ ನ್ನು ತಂದು ಇಲಿ ಹಿಡಿಯುವ ಕೆಲಸ ನೀಡಿದ್ದರು.
10 ವರ್ಷಗಳ ಕಾಲ ಇಲಿಗಳನ್ನು ಬೀದಿಗಳಲ್ಲಿ ಬೇಟೆಯಾಡುತ್ತಿದ್ದ ಲ್ಯಾರಿ ದ ಕ್ಯಾಟ್ ನ್ನು ಇದೀಗ ಸಂಪುಟ ಕಚೇರಿಯಲ್ಲಿ ಇಲಿ ಹಿಡಿಯಲು ನೇಮಕ ಮಾಡಲಾಗಿದೆ. ಅಲ್ಲದೇ ಚೀಫ್ ಮೌಸ್ ಕ್ಯಾಚರ್ ಎಂಬ ಹುದ್ದೆಯನ್ನೂ ನೀಡಲಾಗಿದೆ.
ಅಂದ ಹಾಗೆ ಇದಕ್ಕೂ ಹಿಂದೆ 1989ರಿಂದ 1997ವರೆಗೆ ಒಟ್ಟು ಮೂರು ಪ್ರಧಾನಿಗಳ ಕಾಲದ ವರೆಗೆ ಹ್ಯಾಂಪೆರಿ ಎನ್ನುವ ಬೆಕ್ಕು ಈ ಹುದ್ದೆಯನ್ನು ನಿರ್ವಹಿಸಿತ್ತು. ಆ ಬಳಿಕ ಈ ಬೆಕ್ಕಿಗೆ ನಿವೃತ್ತಿ ನೀಡಲಾಗಿತ್ತು.
ಇನ್ನೂ ವಿಶೇಷ ಅಂದ್ರೆ, ಚೀಫ್ ಮೌಸ್ ಕ್ಯಾಚರ್ ಬೆಕ್ಕುಗಳಿಗೆ ವಿಕಿಪಿಡಿಯಾದಲ್ಲಿ ಪೇಜ್ ಗಳು ಕೂಡಿ ಇವೆ. 1500ನೇ ಇಸವಿಯಿಂದಲೂ ಬ್ರಿಟನ್ ಸರ್ಕಾರ ಈ ರೀತಿ ಬೆಕ್ಕುಗಳನ್ನ ಮೌಸರ್ ಅಂತಾ ಹುದ್ದೆ ಕೊಟ್ಟು ಆಫೀಸಿನಲ್ಲಿ ಇಟ್ಟುಕೊಂಡು ಬಂದಿದ್ದಾರೆ. 1920ರ ಬಳಿಕ ಇದನ್ನು ಅಧಿಕೃತ ಮಾಡಲಾಯಿತು.