ಕಾರ್ಯಕ್ರಮದ ಆತಿಥ್ಯಕಾರಿಣಿಯ ಮೇಲೆ ಅಡುಗೆ ಗುತ್ತಿಗೆದಾರ, ಮತ್ತು ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ
17/02/2021
ಅಹ್ಮದಾಬಾದ್: ಕಾರ್ಯಕ್ರಮವೊಂದಕ್ಕೆ ಆತಿಥ್ಯಕಾರಿಣಿಯಾಗಿ ಕೆಲಸಕ್ಕೆ ಹೋಗಿದ್ದ 19 ವರ್ಷದ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುಜರಾತ್ ನ ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಮುಂಬೈ ಮೂಲದ ಯುವತಿಯನ್ನು ಅಡುಗೆ ಗುತ್ತಿಗೆದಾರ ಮತ್ತು ಅವನ ಸ್ನೇಹಿತ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಅಡುಗೆ ಗುತ್ತಿಗೆದಾರ ಸಾಹಿಲ್ ಶೇಖ್ ಮತ್ತು ಆತನ ಸ್ನೇಹಿತ ತಸ್ಕೀಲ್ ಖುರೇಷಿ ಅತ್ಯಾಚಾರ ವೆಸಗಿರುವ ಆರೋಪಿಗಳಾಗಿದ್ದಾರೆ. ಸಂತ್ರಸ್ತೆ ಅಹಮದಾಬಾದ್‍ಗೆ ಹೋಗಿದ್ದಾಗ ನರೋಲ್ ಪ್ರದೇಶದ ಅಕ್ರುಟಿ ಟೌನ್ ಶಿಪ್ ಎಂಬ ವಸತಿ ಸಮುಚ್ಚಯದಲ್ಲಿ ಅತ್ಯಾಚಾರ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.