ಟೂಲ್ ಕಿಟ್ ಕೇಸ್; ವಕೀಲೆ ನಿಕಿತಾ ಜೇಕಬ್ ಗೆ ಜಾಮೀನು
ಮುಂಬೈ: ಗ್ರೆಟಾ ಥನ್ ಬರ್ಗ್ ಟ್ವೀಟ್ ಮಾಡಿದ್ದ ಟೂಲ್ ಕಿಟ್ ನ್ನು ಸಿದ್ಧಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಮುಂಬೈ ಮೂಲದ ವಕೀಲೆ, ಪರಿಸರವಾದಿ ನಿಕಿತಾ ಜೇಕಬ್ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಮೂರು ವಾರಗಳ ಪ್ರಯಾಣ ಕಾಲದ ನಿರೀಕ್ಷಣಾ ಜಾಮೀನು ನೀಡಿದೆ.
ಜಾಮೀನಿ ಮನವಿಯ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಡಿ.ನಾಯಕ್ ಅವರ ಏಕ ಸದಸ್ಯ ಪೀಠ, ಪೊಲೀಸ್ ಅಧಿಕಾರಿಗಳು ಆಕೆಯ ಮನೆಯಿಂದ ಲ್ಯಾಪ್ ಟಾಪ್ ಫೋನ್ ವಶಪಡಿಸಿಕೊಂಡು ಹೇಳಿಕೆ ದಾಖಲಿಸಿಕೊಂಡಿದೆ. ಹಾಗಾಗಿ ನಿಕಿತಾ ತನಿಖೆಗೆ ಲಭ್ಯವಿದ್ದಾರೆ. ಎಂಬುವುದನ್ನು ಪರಿಗಣಿಸಿ ಅವರಿಗೆ ಜಾಮೀನು ನೀಡಲಾಗಿದೆ ಎಂದು ಹೇಳಿದ್ದಾರೆ.
ನಿಕಿತಾ ಅವರು ಬಂಧನಕ್ಕೊಳಗಾದರೆ 25 ಸಾವಿರ ವೈಯಕ್ತಿಕ ಮುಚ್ಚಳಿಕೆ ಮತ್ತುಅದೇ ಮೊತ್ತದ ಜಾಮೀನು ನೀಡಿದರೆ ಅವರನ್ನು ಬಿಡುಗಡೆ ಮಾಡಬಹುದು ಎಂದು ನ್ಯಾಯಾಲಯವು ಹೇಳಿದೆ.
ರೈತರ ಹೋರಾಟದ ಬಗ್ಗೆ ಗ್ರೆಟಾ ಥನ್ ಬರ್ಗ್ ಹಂಚಿಕೊಂಡ ಟೂಲ್ ಕಿಟ್ ಸಿದ್ಧಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಪರಿಸರವಾದಿ ದಿಶಾ ರವಿ, ನಿಕಿತಾ ಜೇಕಬ್ , ಶಂತನು ಮುಲಕ್ ಅವರನ್ನು ಬಂಧಿಸಲಾಗಿದೆ.