'ಗಡಿ' ದಾಟಿದ ಪ್ರೀತಿ: ವಾಟ್ಸಪ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ 22 ವರ್ಷದ ಭಾರತೀಯ ಯುವತಿ..! - Mahanayaka

‘ಗಡಿ’ ದಾಟಿದ ಪ್ರೀತಿ: ವಾಟ್ಸಪ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ 22 ವರ್ಷದ ಭಾರತೀಯ ಯುವತಿ..!

07/02/2024

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ 22 ವರ್ಷದ ಯುವತಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗಳೊಂದಿಗೆ ವಾಟ್ಸಾಪ್‌ನಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಾಳೆ.

ಪೂಂಚ್‌ನ್ ಖಾದಿ ಕರ್ಮದಾ ನಿವಾಸಿ ಶಬ್ನಮ್ ಬಿ ಗುಲಾಮ್ ರುಬಾನಿ ಅವರನ್ನು ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದಾರೆ. ಆದರೆ ಈ ಮಹಿಳೆಯು ತನ್ನ 4 ವರ್ಷದ ಹಿರಿಯ ಮಗಳನ್ನು ತನ್ನೊಂದಿಗೆ ಕರೆದುಕೊಂಡು ಹೋಗಿಲ್ಲ.

ಮಹಿಳೆಯ ಪತಿಯು ತನ್ನ ಪತ್ನಿ ಕಾಣೆಯಾದ ದೂರು ದಾಖಲಿಸಿದ್ದು, ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವರದಿಗಳ ಪ್ರಕಾರ, ಮಹಿಳೆಯ ಮೂವರು ಚಿಕ್ಕಪ್ಪ ಮತ್ತು ಓರ್ವ ಚಿಕ್ಕಮ್ಮ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಈ‌‌ ಮಹಿಳೆಯು ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದಳು.

ಕಳೆದ ವರ್ಷ ರಾಜಸ್ಥಾನದ 34 ವರ್ಷದ ವಿವಾಹಿತ ಮಹಿಳೆ ಫೇಸ್‌ಬುಕ್‌‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ್ದರು. ಇಬ್ಬರು ಮಕ್ಕಳ ತಾಯಿಯಾಗಿರುವ ಅಂಜು, ತನ್ನ ಫೇಸ್ಬುಕ್ ಸ್ನೇಹಿತ ನಸ್ರುಲ್ಲಾನನ್ನು ಮದುವೆಯಾಗಲು 2023 ರ ಜುಲೈನಲ್ಲಿ ಖೈಬರ್ ಪಖ್ತುನ್ಖ್ವಾದ ದೂರದ ಹಳ್ಳಿಗೆ ಪ್ರಯಾಣಿಸಿದ್ದರು. ಅವಳು ತನ್ನ ಇಬ್ಬರು ಮಕ್ಕಳನ್ನು ಭಾರತದಲ್ಲಿಯೇ ಬಿಟ್ಟಳು. ಅವರು ತಮ್ಮ ಭಾರತೀಯ ಪತಿ ಮತ್ತು ಮಕ್ಕಳೊಂದಿಗೆ ರಾಜಸ್ಥಾನದ ಭಿವಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದರು.

ಇತ್ತೀಚಿನ ಸುದ್ದಿ