ಚಿಹ್ನೆ ಕೈ ತಪ್ಪಿದ ಬೆನ್ನಲ್ಲೇ ತಮ್ಮ ರಾಜಕೀಯ ಪಕ್ಷದ ಹೊಸ ಹೆಸರನ್ನು ಘೋಷಿಸಿದ ಶರದ್ ಪವಾರ್ ಬಣ - Mahanayaka
2:00 AM Saturday 21 - December 2024

ಚಿಹ್ನೆ ಕೈ ತಪ್ಪಿದ ಬೆನ್ನಲ್ಲೇ ತಮ್ಮ ರಾಜಕೀಯ ಪಕ್ಷದ ಹೊಸ ಹೆಸರನ್ನು ಘೋಷಿಸಿದ ಶರದ್ ಪವಾರ್ ಬಣ

07/02/2024

ಕೇಂದ್ರ ಚುನಾವಣಾ ಆಯೋಗವು ಅಜಿತ್‌ ಪವಾರ್‌ ಬಣವೇ ನಿಜವಾದ ಎನ್‌ಸಿಪಿ ಎಂದು ಘೋಷಿಸಿದ ಬೆನ್ನಲ್ಲೇ ಶರದ್‌ ಪವಾರ್‌ ಬಣವು ತಮ್ಮ ಪಕ್ಷಕ್ಕೆ ಹೊಸ ಹೆಸರನ್ನು ನಾಮಕರಣ ಮಾಡಿದೆ.

ನಿನ್ನೆ ಚುನಾವಣಾ ಆಯೋಗವು ಶರದ್‌ ಪವರ್‌ ಬಣಕ್ಕೆ ಹೊಸ ಹೆಸರನ್ನು ಸೂಚಿಸಲು 1 ವಾರ ಗಡುವು ನೀಡಿತ್ತು. ಚುನಾವಣಾ ಆಯೋಗವು ಹೊಸ ಹೆಸರನ್ನು ಮತ್ತು ಚಿಹ್ನೆಯನ್ನು ತಿಳಿಸಲು ಸೂಚಿಸಿದ್ದ ಬೆನ್ನಲ್ಲೇ ಶರದ್‌ ಪವಾರ್‌ ಬಣವು ಎನ್‌ಸಿಪಿ ಶರದ್ ಪವಾರ್, ಎನ್‌ಸಿಪಿ ಶರಶ್ಚಂದ್ರ ಪವಾರ್ ಮತ್ತು ಎನ್‌ಸಿಪಿ ಶರದ್ರಾವ್ ಪವಾರ್ ಎಂಬ ಮೂರು ಹೆಸರಗಳನ್ನು ಚುನಾವಣಾ ಆಯೋಗಕ್ಕೆ ನೀಡಿತ್ತು. ಜೊತೆಗೆ ಆಲದ ಮರ ಮತ್ತು ಉದಯಿಸುತ್ತಿರುವ ಸೂರ್ಯ ಚಿಹ್ನೆಯನ್ನು ನೀಡಿದೆ.

ಈ ಬೆನ್ನಲ್ಲೇ ಇಂದು ಶರದ್‌ ಪವಾರ್‌ ಬಣಕ್ಕೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ- ಶರಶ್ಚಂದ್ರ ಪವಾರ್ ಎಂದು ಹೆಸರನ್ನು ಭಾರತೀಯ ಚುನಾವಣಾ ಆಯೋಗವು ಫೈನಲ್‌ ಮಾಡಿದೆ.
ಗಡಿಯಾರ ಚಿಹ್ನೆಯನ್ನು ಕಳೆದುಕೊಂಡ ನಂತರ , ಶರದ್ ಪವಾರ್ ಶಿಬಿರವು ಇಂದು ತನ್ನ ಕಚೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಿತು. ಇತ್ತ ಅಜಿತ್ ಪವಾರ್ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು.
6 ತಿಂಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ವಿಚಾರಣೆಗಳನ್ನು ಪೂರ್ಣಗೊಳಿಸಿದ ನಂತರ ಅಜಿತ್ ಪವಾರ್ ಪರವಾಗಿ ಚುನಾವಣಾ ಆಯೋಗದ ತೀರ್ಪು ಬಂದಿದೆ.

ಇತ್ತೀಚಿನ ಸುದ್ದಿ