ಉತ್ತರಾಖಂಡದಲ್ಲಿ ಮದರಸಾ ಧ್ವಂಸದ ವೇಳೆ ನಡೀತು ಗಲಭೆ: ಗುಂಡಿಕ್ಕಿ ಹತ್ಯೆಗೆ ಆದೇಶ; ಕರ್ಫ್ಯೂ ಜಾರಿ - Mahanayaka

ಉತ್ತರಾಖಂಡದಲ್ಲಿ ಮದರಸಾ ಧ್ವಂಸದ ವೇಳೆ ನಡೀತು ಗಲಭೆ: ಗುಂಡಿಕ್ಕಿ ಹತ್ಯೆಗೆ ಆದೇಶ; ಕರ್ಫ್ಯೂ ಜಾರಿ

08/02/2024

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಗುರುವಾರ ಅಧಿಕಾರಿಗಳು ಅಕ್ರಮ ಮದರಸಾವನ್ನು ನೆಲಸಮಗೊಳಿಸಿದ ನಂತರ ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಪೊಲೀಸ್ ಕಾರು ಸೇರಿದಂತೆ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಘರ್ಷಣೆಗಳು ಭುಗಿಲೆದ್ದವು.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹಲ್ವಾನಿಯ ಬನ್ಬುಲ್ಪುರದಲ್ಲಿ ಗುಂಡು ಹಾರಿಸಲು ಆದೇಶ ಹೊರಡಿಸಿದ್ದಾರೆ ಮತ್ತು ಗಲಭೆಯನ್ನು ಗಮನದಲ್ಲಿಟ್ಟುಕೊಂಡು ಕರ್ಫ್ಯೂ ವಿಧಿಸಲಾಗಿದೆ. ಇದಲ್ಲದೆ, ಹಲ್ದ್ವಾನಿಯಲ್ಲಿ ಎಲ್ಲಾ ಶಾಲೆಗಳನ್ನು ಶುಕ್ರವಾರ ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.

ಹಲ್ದ್ವಾನಿ ಮುನ್ಸಿಪಲ್ ಕಾರ್ಪೊರೇಷನ್‌ನ ಅಧಿಕಾರಿಗಳು ಇಂದು ಬನ್ಬುಲ್ಪುರ ಪೊಲೀಸ್ ಠಾಣೆಯ ಬಳಿ ಅಕ್ರಮವಾಗಿ ನಿರ್ಮಿಸಲಾದ ಮದರಸಾವನ್ನು‌ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಮದರಸಾವನ್ನು ನೆಲಸಮಗೊಳಿಸಿದ್ದರು.


Provided by

ಇದಕ್ಕೆ ಪ್ರತೀಕಾರವಾಗಿ ಹತ್ತಿರದಲ್ಲಿ ವಾಸಿಸುವ ವ್ಯಕ್ತಿಗಳ ಗುಂಪು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿತು. ಇದರ ಪರಿಣಾಮವಾಗಿ ಹಲವಾರು ಅಧಿಕಾರಿಗಳು ಗಾಯಗೊಂಡಿದ್ದಾರೆ.
ಪೊಲೀಸ್ ವಾಹನಗಳು ಸೇರಿದಂತೆ ಈ ಪ್ರದೇಶದಲ್ಲಿ ಹಲವಾರು ವಾಹನಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಬೆಂಕಿ ಹಚ್ಚಲಾಗಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಭೆ ನಡೆಸಿದ ನಂತರ ಬನ್ಬುಲ್ಪುರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮಾತ್ರ ಜನರಿಗೆ ಹೊರಗೆ ಹೋಗಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನ್ಬುಲ್ಪುರ ಪೊಲೀಸ್ ಠಾಣೆಯನ್ನು ಜನಸಮೂಹವು ಸುತ್ತುವರೆದಿದ್ದರಿಂದ ಹಲವಾರು ಪತ್ರಕರ್ತರು ಮತ್ತು ಆಡಳಿತ ಅಧಿಕಾರಿಗಳು ಪೊಲೀಸ್ ಠಾಣೆಯೊಳಗೆ ಸಿಕ್ಕಿಬಿದ್ದಿದ್ದಾರೆ.

ಇತ್ತೀಚಿನ ಸುದ್ದಿ