ಆಸ್ಪತ್ರೆಯಲ್ಲಿ ಆಪರೇಷನ್ ಮಾಡೋಕೇ ಸಹಾಯ ಮಾಡಿದ ಉದ್ಯಮಿ: ವಿಡಿಯೋ ವೈರಲ್
ಅಗರ್ತಲಾದ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಆರ್ಥೋಪೆಡಿಕ್ ಇಂಪ್ಲಾಂಟ್ ಮೆಟೀರಿಯಲ್ ಪೂರೈಕೆದಾರನೋರ್ವ ಶಸ್ತ್ರಚಿಕಿತ್ಸಕರಿಗೆ ಆಪರೇಷನ್ ಮಾಡೋಕೇ ಸಹಾಯ ಮಾಡಿದ ಘಟನೆಯ ಬಗ್ಗೆ ತ್ರಿಪುರಾ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 19 ರಂದು ಇಂದಿರಾ ಗಾಂಧಿ ಮೆಮೋರಿಯಲ್ (ಐಜಿಎಂ) ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ರೋಗಿಗಳ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಶಸ್ತ್ರಚಿಕಿತ್ಸಕರ ಏಪ್ರನ್ ಧರಿಸಿದ ವ್ಯಕ್ತಿ ಇಬ್ಬರು ಮೂಳೆ ಶಸ್ತ್ರಚಿಕಿತ್ಸಕರಿಗೆ ಸಹಾಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಐಜಿಎಂ ಆಸ್ಪತ್ರೆ ತ್ರಿಪುರಾದ ಎರಡನೇ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿದೆ.
ಈ ವ್ಯಕ್ತಿಯನ್ನು ಜಂತು ದೇಬ್ನಾಥ್ ಎಂದು ಗುರುತಿಸಲಾಗಿದ್ದು, ಮೂಳೆ ರೋಗಿಗಳಿಗೆ ಇಂಪ್ಲಾಂಟ್ ಸಾಮಗ್ರಿಗಳ ಪೂರೈಕೆದಾರನಾಗಿದ್ದಾನೆ.
“ದೃಶ್ಯಾವಳಿಗಳ ಆಧಾರದ ಮೇಲೆ, ಆರೋಗ್ಯ ಸೇವೆಗಳ ಜಂಟಿ ನಿರ್ದೇಶಕ ಡಾ.ಸೌವಿಕ್ ದೆಬ್ಬರ್ಮಾ ನೇತೃತ್ವದ ನಾಲ್ಕು ಸದಸ್ಯರ ಸಮಿತಿಯು ಈ ಘಟನೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಒಂದು ವಾರದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ” ಎಂದು ಆರೋಗ್ಯ ಸೇವೆಗಳ ನಿರ್ದೇಶಕಿ ಡಾ.ಸುಪ್ರಿಯಾ ಮಲ್ಲಿಕ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಈ ಘಟನೆ ನಿಜವೆಂದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುತ್ತದೆ. ಉದ್ಯಮಿ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಸೇರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
“ಆಪರೇಷನ್ ಥಿಯೇಟರ್ ನಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಜಂತು ದೇಬಂತ್ ಹಾಜರಿರಲಿಲ್ಲ ಅಥವಾ ಮೂಳೆ ಶಸ್ತ್ರಚಿಕಿತ್ಸಕರಿಗೆ ಸಹಾಯ ಮಾಡಲಿಲ್ಲ” ಎಂದು ಐಜಿಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದೇಬಶ್ರೀ ದೆಬ್ಬರ್ಮಾ ಹೇಳಿದ್ದಾರೆ.
“ಯಾವುದೇ ಹೊರಗಿನವರ ಇಂತಹ ಸಾಹಸಮಯ ಕ್ರಮವನ್ನು ನಾವು ಬೆಂಬಲಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.