ಪ್ರಮಾಣ ವಚನ ಸ್ವೀಕಾರಕ್ಕೆ ಹೆಲಿಕಾಫ್ಟರ್ ನಲ್ಲಿ ಬಂದ ಗ್ರಾ.ಪಂ. ಅಧ್ಯಕ್ಷ! - Mahanayaka

ಪ್ರಮಾಣ ವಚನ ಸ್ವೀಕಾರಕ್ಕೆ ಹೆಲಿಕಾಫ್ಟರ್ ನಲ್ಲಿ ಬಂದ ಗ್ರಾ.ಪಂ. ಅಧ್ಯಕ್ಷ!

18/02/2021

ಅಹ್ಮದಾಬಾದ್: ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸಲು ಹೆಲಿಕಾಫ್ಟರ್ ನಲ್ಲಿ ಬಂದ ಘಟನೆ ನಡೆದಿದ್ದು, ಮಹಾರಾಷ್ಟ್ರದ ಅಹ್ಮದ್​ನಗರ ಜಿಲ್ಲೆಯ ಅಂಬಿ-ದುಮಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಅಂಬಿ-ದುಮಾಲಾ ಗ್ರಾಮದ ಅಧ್ಯಕ್ಷ 50 ವರ್ಷದ  ಜಲಿಂದರ್ ಗಾಗರೆ ಪ್ರಮಾಣ ವಚನ ಮಾಡಲು ಹೆಲಿಕಾಫ್ಟರ್ ನಲ್ಲಿ ಬಂದಿಳಿದಿದ್ದು, ಚುನಾವಣೆಗೂ ಮೊದಲು ಇಲ್ಲದ ಆಡಂಬರ ಗೆದ್ದ ಬಳಿಕ ಕಂಡು ಜನರು ಹುಬ್ಬೇರಿಸಿದ್ದಾರೆ.

ಜಲಿಂದರ್ ಏನೂ ಯಾವುದರಲ್ಲೂ ಕಡಿಮೆ ಇಲ್ಲದ ವ್ಯಕ್ತಿ. ಪುಣೆಯಲ್ಲಿ ಸ್ವಂತ ಕಂಪೆನಿ ಕೂಡ ಹೊಂದಿದ್ದಾನೆ. ಆದರೂ ರಾಜಕೀಯದಲ್ಲಿ ಆಸಕ್ತಿಯಿದ್ದು, ತನ್ನ ಬಲದಿಂದ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ.

ಫೆ.12ರಂದು  ಪ್ರಮಾಣ ವಚನಕ್ಕೆ ದಿನ ನಿಗದಿ ಆಗಿತ್ತು. ಪ್ರಮಾಣ ವಚನ ಸಮಾರಂಭಕ್ಕೆ ಬರಲು ಜಲಿಂದರ್ ಹೆಲಿಕಾಫ್ಟರ್ ಬುಕ್ ಮಾಡಿದ್ದು, ಅಲ್ಲಿಂದ ಹಳ್ಳಿಗೆ ಆಗಮಿಸಿದ್ದಾರೆ. ಬಳಿಕ 12 ಎತ್ತಿನ ಗಾಡಿಗಳಲ್ಲಿ ಮೆರವಣಿಗೆ ಹೊರಟು, ನಂತರ ಪ್ರಮಾಣ ಸ್ವೀಕರಿಸಿದರು.

ಆರಂಭದಲ್ಲಿ ಹೆಲಿಕಾಫ್ಟರ್ ಶೋಕಿ ತೋರಿಸಿದ್ದಕ್ಕೆ ಗ್ರಾಮಸ್ಥರು ಶಾಕ್ ನಲ್ಲಿದ್ದರೆ,. ಇತ್ತ, ತಾನು ಗ್ರಾಮದ ಅಭಿವೃದ್ಧಿಗಾಗಿ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಜಿಲಿಂದರ್ ಹೇಳಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ

 

 

ಇತ್ತೀಚಿನ ಸುದ್ದಿ