ಬಸ್ ನೊಂದಿಗೆ ಮುಳುಗಿತು ದಂಪತಿಯ ಕನಸು | 51 ಜನರು ಮಾತ್ರವಲ್ಲ, ಅವರ ಕನಸೂ ಜಲಸಮಾಧಿಯಾಗಿದೆ!
18/02/2021
ಭೋಪಾಲ್: ಅವರು ಇಚ್ಛಿಸಿದ ಬದುಕು ಅವರಿಗೆ ಸಿಕ್ಕಿತ್ತು. ಆದರೆ ಅದು ಬಹಳಷ್ಟು ದಿನ ಉಳಿಯಲಿಲ್ಲ. ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಸ್ಸೊಂದು ಕಾಲುವೆಗೆ ಬಿದ್ದು, ಅದರಲ್ಲಿದ್ದ 51 ಜನರು ಸಾವಿಗೀಡಾದ ದುರ್ಘಟನೆಯಲ್ಲಿ ಅದೆಷ್ಟು ನೋವಿನ, ನಲಿವಿನ ಕಥೆಗಳಿತ್ತು. ಅವುಗಳಲ್ಲಿ ಅಜಯ್ ಹಾಗೂ ತಪಸ್ಯಾ ದಂಪತಿಯ ಕಥೆಯೂ ಒಂದು.
ಕಳೆದ ವರ್ಷ ಜೂನ್ 8ರಂದು 25 ವರ್ಷದ ಅಜಯ್, 23 ವರ್ಷದ ತಪಸ್ಯಾ ವಿವಾಹವಾಗಿದ್ದಾರೆ. ನರ್ಸ್ ಆಗಿ ಸೇವೆ ಮಾಡಬೇಕು ಎನ್ನುವ ಆಸೆಯಲ್ಲಿದ್ದ ತಪಸ್ಯಾ ಪರೀಕ್ಷಾ ಸಿದ್ಧತೆಯಲ್ಲಿದ್ದರು. ಪತ್ನಿಯ ಪರೀಕ್ಷೆ ಎಎನ್ ಎಂ ಪೇಪರ್ ತರಲು ಅಜಯ್ ಹೊರಟಿದ್ದಾರೆ. ಇದೇ ಸಮಯದಲ್ಲಿ ತಾನೂ ಬರುತ್ತೇನೆ ಎಂದು ತಪಸ್ಯಾ ಕೂಡ ಹೋಗಿದ್ದಾರೆ.
ಜೊತೆಯಾಗಿ ಇವರು ಹೋದ ಬಸ್ ಅಪಘಾತಕ್ಕೆ ಸಿಲುಕಿದ್ದು, ಬಸ್ ಕಾಲುವೆಗೆ ಬಿದ್ದು, ಭಾರೀ ದುರ್ಘಟನೆಯೇ ನಡೆದು ಹೋಗಿದೆ. ತಪಸ್ಯಾ ದೇಹ 3 ಗಂಟೆಗೆ ದೊರಕಿದ್ದು, ಅಜಯ್ ದೇಹ 5 ಗಂಟೆಗೆ ಸಿಕ್ಕಿದೆ. ಮರಣೋತ್ತರ ಪರೀಕ್ಷೆಯ ನಂತರ ಇಬ್ಬರ ಅಂತ್ಯಸಂಸ್ಕಾರವನ್ನೂ ಜೊತೆಗೆ ಮಾಡಲಾಗಿದೆ.