ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಸ್ವಯಂ ಉದ್ಯೋಗ ಆರಂಭಿಸಲು ಅರ್ಜಿ ಸಲ್ಲಿಸಿ - Mahanayaka
7:06 PM Thursday 12 - December 2024

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಸ್ವಯಂ ಉದ್ಯೋಗ ಆರಂಭಿಸಲು ಅರ್ಜಿ ಸಲ್ಲಿಸಿ

18/02/2021

ಹಾಸನ: ವಿಶೇಷ ಕೇಂದ್ರೀಯ ನೆರವು ಮತ್ತು ಭಾರತ ಸಂವಿಧಾನ ಅನುಚ್ಚೇದ 275/1 ರಡಿಯಲ್ಲಿ ನಿರುದ್ಯೋಗಿ ಅಭ್ಯರ್ಥಿಗಳಿಗೆ ಸಹಾಯಧನ ನೀಡುವ ಯೋಜನೆಯಡಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಕುರಿ ಮೇಕೆ ಘಟಕ/ಸ್ವಯಂ ಉದ್ಯೋಗ (ಇ-ಕಾರ್ಟ್) ಕಾರ್ಯಕ್ರಮದಡಿ ಸಹಾಯಧನ ನೀಡಲು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಫಲಾನುಭವಿಗಳು ಎಲ್ಲಾ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಗಳ ಸಹಾಯಕ ನಿರ್ದೇಶಕರುಗಳ ಕಚೇರಿಯಲ್ಲಿ ಅರ್ಜಿ ಪಡೆದು ಮಾ.15 ರೊಳಗೆ ಉಪ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಇ-ಕಾರ್ಟ್ (ಹಣ್ಣು ಮತ್ತು ತರಕಾರಿ ಮಾರುವ ಎಲೆಕ್ಟ್ರಿಕಲ್ ವಾಹನ) ಕಾರ್ಯಕ್ರಮದಡಿ ಯೊಜನೆಗೆ ಅರ್ಜಿ ಸಲ್ಲಿಸುವವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು, ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದೊಳಗಿರಬೇಕು, ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ರೂ.1.50 ಲಕ್ಷ ನಗರ ಪ್ರದೇಶಗಳಲ್ಲಿ 2.00 ಲಕ್ಷಗಳ ಮೀರಿರಬಾರದು.

ಅರ್ಜಿದಾರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು, ಅರ್ಜಿದಾರರಾಗಲಿ, ಕುಟುಂಬ ಸದಸ್ಯರಾಗಲಿ ನಿಗಮದ ಯಾವುದೇ ಯೋಜನೆಯಡಿ ಈ ಹಿಂದೆ ಸೌಲಭ್ಯವನ್ನು ಪಡೆದಿರಬಾರದು.

ಘಟಕ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಪ್ರಮಾಣದ ಪತ್ರ / ಮುಚ್ಚಳಿಕೆ ಪತ್ರ ನೀಡಬೇಕು, ಅರ್ಜಿದಾರರು ಬಿ.ಪಿ.ಎಲ್. ಕಾರ್ಡ್ ಮತ್ತು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್. (ಲಘು ಅತವಾ ಬಾರಿ) ಹೊಂದಿರಬೇಕು, ಅರ್ಜಿ ಸಲ್ಲಿಸುವ ನಿರುದ್ಯೋಗಿ ಯುವಕ/ ಯುವತಿರು ನಗರದ ಪ್ರದೇಶದ ವಾಸಿಯಾಗಿರಬೇಕು.

ಕುರಿ, ಮೇಕೆ ಘಟಕ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸುವವರು ಪರಿಶಿಷ್ಟ ಪಂಗಡದವರಾಗರಬೇಕು, 18 ರಿಂದ 60 ವರ್ಷದೊಳಗಿರಬೇಕು, ಕುಟುಂಬ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ 1,50,000 ಒಳಗಿರಬೇಕು ಅರ್ಜಿದಾರರು ಹಾಗೂ ಅವರ ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು. ಘಟಕ ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಪ್ರಮಾಣ ಪತ್ರ/ ಮುಚ್ಚಳಿಕೆ ಪತ್ರ ನೀಡಬೇಕು.

ಫಲಾಪೇಕ್ಷಿ ಅಥವಾ ಅವರ ಕುಟುಂಬದವರು ಈ ಹಿಂದೆ ಯಾವುದೇ ಇಲಾಖೆ, ನಿಗಮದಿಂದ ಯಾವುದೇ ಯೋಜನೆಯಡಿ ಸೌಲಭ್ಯ ಪಡೆದಿರಬಾರದು ಹಾಗೂ ಮಹಿಳಾ ಫಲಾನುಭವಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಹಾಸನ-08172-268960, ಸಹಾಯಕ ನಿರ್ದೇಶಕರ ಕಚೇರಿ ಹಾಸನ 08172-269997, ಸಹಾಯಕ ನಿರ್ದೇಶಕರ ಕಚೇರಿ ಆಲೂರು 08172-218467, ಸಹಾಯಕ ನಿರ್ದೇಶಕರ ಕಚೇರಿ ಅರಕಲಗೂಡು 08175-222008 ಸಹಾಯಕ ನಿರ್ದೇಶಕರ ಕಚೇರಿ ಚನ್ನರಾಯಪಟ್ಟಣ 08176-254301 ಸಹಾಯಕನಿದೇಶಕರ ಕಚೇರಿ ಹೊಳೆನರಸೀಪುರ 08175-273566, ಸಹಾಯಕ ನಿರ್ದೇಶಕರ ಕಚೇರಿ ಸಕಲೇಶಪುರ 08173-243618 ಸಂಪರ್ಕಿಸಬಹುದಾಗಿದೆ.

ಇತ್ತೀಚಿನ ಸುದ್ದಿ