ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದ ಪತಿಯೇ ಬರ್ಬರವಾಗಿ ಹತ್ಯೆ ಮಾಡಿದ! - Mahanayaka
5:34 AM Friday 20 - September 2024

ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದ ಪತಿಯೇ ಬರ್ಬರವಾಗಿ ಹತ್ಯೆ ಮಾಡಿದ!

18/02/2021

ಕೋಯಿಕ್ಕೋಡ್: ಪತ್ನಿಯನ್ನು ಹೆಚ್ಚು ಪ್ರೀತಿಸುತ್ತಿದ್ದ ವ್ಯಕ್ತಿಯೇ ಆಕೆಯ ತಲೆಯನ್ನು ಕತ್ತರಿಸಿ ಹತ್ಯೆ ಮಾಡಿರುವ ಘಟನೆ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆದಿದ್ದು, ಮನೆಯಲ್ಲಿ ಎಲ್ಲರೂ ಇದ್ದ ಸಂದರ್ಭದಲ್ಲಿಯೇ  ಆರೋಪಿ ಹತ್ಯೆ ಮಾಡಿದ್ದಾನೆ.

20 ವರ್ಷದ ಮುಹ್ಸಿಲ ಹತ್ಯೆಗೀಡಾದ ಮಹಿಳೆಯಾಗಿದ್ದಾಳೆ. ಮುಕ್ಕಮ್ ಮುನ್ಸಿಪಾಲಿಟಿಯ ಚೇರುವಟಿ ಪಜಂಪರಂಬು ನಿವಾಸಿ ಜಹೀರ್ ಕುಟ್ಟಿಯಾಲಿ(30) ಹತ್ಯೆ ಆರೋಪಿಯಾಗಿದ್ದಾನೆ. ಕಳೆದ ವರ್ಷ ಸೆಪ್ಟಂಬರ್ 5ರಂದು ಈತ ತನ್ನ ಮುಹ್ಸಿಲರನ್ನು ವಿವಾಹವಾಗಿದ್ದ.

ಫೆ.16ರಂದು ಈ ಘಟನೆ ನಡೆದಿದ್ದು, ಜಹೀರ್ ನ ಬೆಡ್ ರೂಮ್ ನಿಂದ ಜೋರಾದ ಶಬ್ದವೊಂದು ಕೇಳಿ ಬಂದಿದ್ದು, ಶಬ್ಧ ಕೇಳಿ ಭಯಗೊಂಡು ತಂದೆ-ತಾಯಿ ಹೊರಗೆ ಬಂದಿದ್ದು, ಈ ವೇಳೆ ಜಹೀರ್ ನ ರೂಮ್ ಬಾಗಿಲಿನಲ್ಲಿ ರಕ್ತದ ಕಲೆ ಕಂಡು ಬಂದಿದೆ. ಬಾಗಿಲು ತೆಗೆಯಲು ಹೇಳಿದರೂ ಆತ ತೆಗೆಯಲಿಲ್ಲ. ಬಳಿಕ ಬಾಗಿಲು ತೆಗೆದು ಅಲ್ಲಿಂದ ಓಡಿ ಹೋಗಿದ್ದಾನೆ.


Provided by

ಓಡಿ ಹೋದ ಜಹೀರ್ ನನ್ನು ಬೆನ್ನಟ್ಟಿ ಕೆಲವರು ಹಿಡಿದಿದ್ದಾರೆ. ಇದೇ ಸಂದರ್ಭದಲ್ಲಿ ಮನೆಯವರು ಕೂಡ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು, ಜಹೀರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮದುವೆಯಾದ ಬಳಿಕ ಪತ್ನಿಯನ್ನು ಜಹೀರ್ ಬಹಳ ಪ್ರೀತಿಸುತ್ತಿದ್ದ. ಮದುವೆಯ ಬಳಿಕ ತನ್ನ ಸ್ನೇಹಿತರನ್ನು ಕೂಡ ದೂರ ಮಾಡಿದ್ದ. ಆದರೆ ಈ ನಡುವೆ ಪತ್ನಿಯ ನಡವಳಿಕೆಯ ಬಗ್ಗೆ ಆತನಿಗೆ ಅನುಮಾನಗಳು ಆರಂಭವಾಗಿತ್ತು. ಹೀಗಾಗಿ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ವಿಚಾರಣೆಯ ವೇಳೆ ಜಹೀರ್ ತಿಳಿಸಿದ್ದಾನೆ

ಇತ್ತೀಚಿನ ಸುದ್ದಿ