ಉನ್ನಾವೋ ಅನ್ಯಾಯ:  ಮೃತಪಟ್ಟ ಬಾಲಕಿಯರ ಕೈ-ಕುತ್ತಿಗೆ ದುಪ್ಪಟ್ಟಾದಿಂದ ಕಟ್ಟಲಾಗಿತ್ತು, ಬಟ್ಟೆ ಹರಿದಿತ್ತು - Mahanayaka
5:59 AM Thursday 12 - December 2024

ಉನ್ನಾವೋ ಅನ್ಯಾಯ:  ಮೃತಪಟ್ಟ ಬಾಲಕಿಯರ ಕೈ-ಕುತ್ತಿಗೆ ದುಪ್ಪಟ್ಟಾದಿಂದ ಕಟ್ಟಲಾಗಿತ್ತು, ಬಟ್ಟೆ ಹರಿದಿತ್ತು

19/02/2021

ಉನ್ನಾವೋ: ಉತ್ತರ ಪ್ರದೇಶದ ಉನ್ನಾವೋದಲ್ಲಿ ಅನುಮಾನಾಸ್ಪದವಾಗಿ ಇಬ್ಬರು ಬಾಲಕಿಯರು ಸಾವನ್ನಪ್ಪಿ, ಓರ್ವಳು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ  ಉತ್ತರ ಪ್ರದೇಶ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಬಾಲಕಿಯರ ತಾಯಿ ಈ ಘಟನೆಯ ಬಗ್ಗೆ ವಿವರಿಸುತ್ತಾ,  ಹಲವುಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಮೃತ ಇಬ್ಬರು ಬಾಲಕಿಯರ ಬಟ್ಟೆಗಳು ಹರಿದು ಹೋಗಿದ್ದವು. ಅವರ  ಕೈ ಕುತ್ತಿಗೆಗಳನ್ನು ದುಪ್ಪಟ್ಟಾಗಳಿಂದ ಕಟ್ಟಿ ಹಾಕಲಾಗಿತ್ತು ಎಂದು ಮೃತ ಬಾಲಕಿಯ ತಾಯಿ ಹೇಳಿದ್ದಾರೆ. ಈ ದೃಶ್ಯವನ್ನು ನೋಡಲಾಗದೇ ತಾನು ಕಟ್ಟುಗಳನ್ನು ಬಿಚ್ಚಿದೆ ಎಂದು ಹೇಳಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಬಾಲಕಿ ಕಳೆದ ವರ್ಷ ತಂದೆಯನ್ನು ಕಳೆದುಕೊಂಡಿದ್ದಳು. 10ನೇ ತರಗತಿ ಪಾಸ್ ಮಾಡಿದ್ದ ಆಕೆಗೆ ನಾಲ್ವರು ಸಹೋದರಿಯರು ಹಾಗೂ ಇಬ್ಬರು ಸಹೋದರಿಯರಿದ್ದರು. ಸದ್ಯ ಗಂಭಿರ ಸ್ಥಿತಿಯಲ್ಲಿರುವ ಬಾಲಕಿಗೆ 6 ವೈದ್ಯರ ತಂಡಗಳಿಂದ  ಚಿಕಿತ್ಸೆ ನೀಡಲಾಗುತ್ತಿದೆ.

ಈ ಮೂವರು ವಿದ್ಯಾರ್ಥಿನಿಯರು ಕಲಿಕೆಯಲ್ಲಿ  ಮುಂದೆ ಇದ್ದರು. ಶಾಲೆಗೆ ಕೂಡ ತಪ್ಪದೇ ಹೋಗುತ್ತಿದ್ದರು. ಕೊರೊನಾ ವೈರಸ್ ನಿಂದ ಶಾಲೆಗಳು ಬಂದ್ ಆದ ಬಳಿಕ ಶಾಲೆ ಹೋಗಿರಲಿಲ್ಲ.

ಬಾಲಕಿಯರಿಗೆ ಈ ರೀತಿ ಆಗಿದೆಯಲ್ಲ, ನಿಮಗೆ ಯಾರ ಮೇಲಾದರೂ ಸಂದೇಹ ಇದೆಯೇ? ಎಂದು ಕುಟುಂಬಸ್ಥರನ್ನು ಕೇಳಿದಾಗ. ನಮಗೆ ಯಾರ ಮೇಲೆಯೂ ವೈರತ್ವ ಇಲ್ಲ, ಇದೇ ಮೊದಲ ಬಾರಿಗೆ ನಮ್ಮ ವಿರುದ್ಧ ಇಂತಹದ್ದೊಂದು ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ