ಲಾಕ್ ಡೌನ್ ಸಮಯದಲ್ಲಿ 3 ಮದುವೆಯಾದ ಶಿಕ್ಷಕ | ಧಾರವಾಹಿ ಮಾದರಿಯಲ್ಲಿ ಕಂಡು ಹಿಡಿದ ಹಿಂದಿನ ಪತ್ನಿಯರು
ಕಟಕ್: ಲಾಕ್ ಡೌನ್ ನ ಸಮಯವನ್ನು ಬಳಸಿಕೊಂಡು ಎಷ್ಟೋ ಜನ ನಾನಾ ಸಾಧನೆ ಮಾಡಿರುವ ವರದಿಗಳನ್ನು ನೀವು ಕೇಳಿರಬಹುದು. ಆದರೆ ಇಲ್ಲೊಬ್ಬ ಲಾಕ್ ಡೌನ್ ಅವಧಿಯಲ್ಲಿ ಮೂರು ಮದುವೆಯಾಗಿದ್ದಾನೆ.
ಒಡಿಶಾದ ಕಟಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಶಾಲೆಯ 45 ವರ್ಷದ ಶಿಕ್ಷಕ ಈ ಹಿಂದಿನ ಇಬ್ಬರು ಪತ್ನಿಯರಿಗೆ ಡಿವೋರ್ಸ್ ನೀಡದೆಯೇ ಮತ್ತೆ ಮೂರು ಮದುವೆಯಾಗಿದ್ದು, ಒಟ್ಟು ನಾಲ್ಕು ಪತ್ನಿಯರ ಪತಿ ಈತನಾಗಿದ್ದು, ಇದೀಗ ಜೈಲು ಪಾಲಾಗಿದ್ದಾನೆ.
2001ರಲ್ಲಿ ಈತ ಮೊದಲ ಮದುವೆಯಾಗಿದ್ದಾನೆ. ಆಕೆಯ ಜೊತೆಗೆ 8 ತಿಂಗಳು ಸಂಸಾರ ಮಾಡಿ, ಆಕೆಗೆ ತಿಳಿಯದೇ, ವಿಚ್ಛೇದನವೂ ನೀಡದೇ ಇನ್ನೊಂದು ಮದುವೆಯಾಗಿದ್ದಾನೆ. ಆ ಬಳಿಕ 2ನೇ ಪತ್ನಿಯ ಜೊತೆಗೆ ಮೂರು ವರ್ಷ ಇದ್ದ ಈತ ಆಕೆಯ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾನೆ. ಇತ್ತೀಚೆಗೆ ಈತನ ಮೊದಲ ಪತ್ನಿ ಹಾಗೂ ಎರಡನೇ ಪತ್ನಿ ಭೇಟಿಯಾಗಿದ್ದು, ಈ ವೇಳೆ ಈತನ ಕರ್ಮಕಾಂಡ ಬೆಳಕಿಗೆ ಬಂದಿದೆ. ಈ ಇಬ್ಬರು ಕೂಡ ಧಾರಾವಾಹಿ ಮಾದರಿಯಲ್ಲಿ ತನಿಖೆ ನಡೆಸಿದಾಗ ಈತ ಇನ್ನೂ ಮೂರು ಮದುವೆಯಾಗಿರುವುದು ತಿಳಿದು ಬಂದಿದೆ.
ಲಾಕ್ ಡೌನ್ ಅವಧಿಯನ್ನು ಪೂರ್ತಿಯಾಗಿ ಮದುವೆಯಾಗುವುದಕ್ಕೆ ಬಳಸಿಕೊಂಡಿರುವ ಆರೋಪಿ ಶಿಕ್ಷಕ ಒಟ್ಟು 5 ಮದುವೆಯಾಗಿದ್ದು, ಇದೀಗ ಪತ್ನಿಯರ ದೂರಿನ ಹಿನ್ನೆಲೆಯಲ್ಲಿ ಪೊಲೀಸರ ಅತಿಥಿಯಾಗಿದ್ದಾನರೆ.