ಮಗು ಅತ್ತಿದ್ದಕ್ಕೆ ಕೋಪದಿಂದ ಗೋಡೆಗೆ ಎಸೆದ ಪಾಪಿ ತಂದೆ: ಮಗು ಸಾವು

ಧಾರವಾಡ: ಮಗು ಅತ್ತು ತನ್ನ ನಿದ್ದೆ ಹಾಳು ಮಾಡಿತೆಂದು ಪಾಪಿ ತಂದೆಯೋರ್ವ ಪುಟ್ಟ ಕಂದಮ್ಮನನ್ನು ಗೋಡೆಗೆ ಎಸೆದು ಹತ್ಯೆ ಮಾಡಿದ ಅಮಾನವೀಯ ಘಟನೆಯೊಂದು ಧಾರವಾಡದಿಂದ ವರದಿಯಾಗಿದೆ.
ಶ್ರೇಯಾ(1) ಮೃತಪಟ್ಟ ಮಗುವಾಗಿದ್ದು, ಮಗುವಿನ ತಂದೆ ಶಂಭುಲಿಂಗಯ್ಯ ಶಹಾಪುರಮಠ ಎಂಬಾತ ಮಗುವನ್ನು ಕೊಂದ ಆರೋಪಿಯಾಗಿದ್ದಾನೆ.
ರಾತ್ರಿ ವೇಳೆ ಮಗು ವಿಪರೀತವಾಗಿ ಅಳುತ್ತಿತ್ತು. ಇದರಿಂದ ಕೋಪಗೊಂಡ ಆರೋಪಿ ಮಗುವನ್ನು ಎತ್ತಿ ಗೋಡೆಗೆ ಎಸೆದಿದ್ದಾನೆ. ಪರಿಣಾಮವಾಗಿ ಮಗು ಗಂಭೀರವಾಗಿ ಗಾಯಗೊಂಡಿದ್ದು, ಮಗುವಿನ ತಾಯಿ ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಗರಗ ಠಾಣಾ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಅತ್ತ ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth