ನಿಲ್ಲದ ದಾಳಿ: ಇಸ್ರೇಲಿ ಗುಂಡಿನ ದಾಳಿಗೆ 104 ಫೆಲೆಸ್ತೀನೀಯರು ಬಲಿ

ಗಾಝಾ ನಗರದ ಬಳಿ ಇದ್ದ ಜನರ ಮೇಲೆ ಇಸ್ರೇಲ್ ನಡೆಸಿದ ಗುಂಡಿನ ದಾಳಿಯಲ್ಲಿ 104 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ. 280 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಆ ಸ್ಥಳದಲ್ಲಿ ನಡೆದ ಶೆಲ್ ದಾಳಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಇಸ್ರೇಲ್ ಮಿಲಿಟರಿಯ ವಕ್ತಾರರು ತಿಳಿಸಿದ್ದಾರೆ. ಉತ್ತರ ಗಾಝಾಕ್ಕೆ ಸಹಾಯ ಟ್ರಕ್‌ಗಳು ಬಂದ ವೇಳೆ ತುಳಿದ ಪರಿಣಾಮವಾಗಿ ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಮಿಲಿಟರಿ ಹೇಳಿದೆ.
ಗುಂಪಿನಲ್ಲಿದ್ದ ಹಲವಾರು ಜನರ ಮೇಲೆ ಸೈನಿಕರು ಗುಂಡು ಹಾರಿಸಿದ್ದಾರೆ ಎಂದು ಇಸ್ರೇಲ್ ಮೂಲವೊಂದು ತಿಳಿಸಿದೆ.
“ನಬುಲ್ಸಿ ವೃತ್ತದಲ್ಲಿ ಸಹಾಯ ಟ್ರಕ್ ಗಳಿಗಾಗಿ ಕಾಯುತ್ತಿದ್ದ ಜನರ ವಿರುದ್ಧ ಇಸ್ರೇಲ್ ಆಕ್ರಮಿತ ಸೇನೆ ಇಂದು ಬೆಳಿಗ್ಗೆ ನಡೆಸಿದ ಕೊಳಕು ಹತ್ಯಾಕಾಂಡವನ್ನು ಖಂಡಿಸುತ್ತೇನೆ” ಎಂದು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರ ಕಚೇರಿ ತಿಳಿಸಿದೆ.
ಗಾಝಾ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಖಿದ್ರಾ ಮಾತನಾಡಿ, ಗಾಝಾ ನಗರದ ಪಶ್ಚಿಮದಲ್ಲಿರುವ ಅಲ್-ನಬುಸಿ ವೃತ್ತದಲ್ಲಿ ಈ ಘಟನೆ ನಡೆದಿದೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth