ಬ್ರಾಹ್ಮಣ ಸಮುದಾಯದ ಓಲೈಕೆಗೆ ಜಗತ್ತಿಗೆ ಬೆಳಕಾದ ಬುದ್ಧರ ಪಾಠ ತೆಗೆಯಲು ಹೊರಟ ಶಿಕ್ಷಣ ಸಚಿವರು - Mahanayaka
7:19 AM Thursday 12 - December 2024

ಬ್ರಾಹ್ಮಣ ಸಮುದಾಯದ ಓಲೈಕೆಗೆ ಜಗತ್ತಿಗೆ ಬೆಳಕಾದ ಬುದ್ಧರ ಪಾಠ ತೆಗೆಯಲು ಹೊರಟ ಶಿಕ್ಷಣ ಸಚಿವರು

20/02/2021

ಬೆಂಗಳೂರು: ಆರನೇ ತರಗತಿಯ ಸಮಾಜ ವಿಜ್ಞಾನ ಭಾಗದಲ್ಲಿ ‘ಹೊಸ ಧರ್ಮಗಳ ಉದಯ” ಪಾಠದಲ್ಲಿ ಬೌದ್ಧ ಧರ್ಮ ಹಾಗೂ  ಬುದ್ಧ ಗುರುವಿನ ವಿಷಯವನ್ನು ತೆಗೆಯಲು ಸರ್ಕಾರ ಆದೇಶ ನೀಡಿದೆ. ಇತಿಹಾಸದಲ್ಲಿ ನಡೆದಿರುವ ನಿಜವಾದ ವಿಚಾರಗಳನ್ನು ಬ್ರಾಹ್ಮಣರಿಗೆ ನೋವಾಗುತ್ತದೆ ಎಂದು ಬ್ರಾಹ್ಮಣ ಸಮುದಾಯದ ಕ್ಷೇಮದ ಬಗ್ಗೆ ಮಾತ್ರವೇ ಯೋಚಿಸುವ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿದ್ದು, ಈ ನಡೆಗೆ ಮುಂದಿನ ಚುನಾವಣೆಯಲ್ಲಿ ಬೃಹತ್ ಬೌದ್ಧ ಸಮಾಜ ತಕ್ಕ ಉತ್ತರ ನೀಡಲಿದೆ ಎಂಬ ಮಾತುಗಳು ಸದ್ಯ ಕೇಳಿ ಬಂದಿದೆ.

ಹೊಸ ಧರ್ಮಗಳ ಉದಯ ಭಾಗದಲ್ಲಿ ಬ್ರಾಹಣ ಸಮುದಾಯವನ್ನು ಅವಹೇಳ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದೆ ಎಂದು ಈ ನಡುವೆಯನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ಆದರೆ ವಾಸ್ತವವಾಗಿ, ಬ್ರಾಹ್ಮಣ ಸಮುದಾಯದ ಓಲೈಕೆಗಾಗಿ ಇಡೀ ಜಗತ್ತಿಗೆ ದಾರಿ ದೀಪವಾಗಿರುವ ಬುದ್ಧ ಹಾಗೂ ಬೌದ್ಧ ಧರ್ಮದ ವಿಚಾರಗಳನ್ನು ಮರೆ ಮಾಡಲು ಸರ್ಕಾರ ಮುಂದಾಗಿದೆ. ಸರ್ಕಾರ ಕೇವಲ ಒಂದು ಸಮುದಾಯದ ಹಿತ ಕಾಯಲು ಜಗತ್ತಿಗೆ ಬೆಳಗಾಗಿರುವ ಬುದ್ಧರ  ತೆಗೆಯಲು ಮುಂದಾಗಿದೆ. ನೀವೇನು ಸರ್ಕಾರ ನಡೆಸುತ್ತಿದ್ದೀರಾ?, ನೀವೇನು ಶಿಕ್ಷಣ ಇಲಾಖೆ ನಡೆಸುತ್ತಿದ್ದೀರಾ ಅಥವಾ ಧಾರ್ಮಿಕ ಕೇಂದ್ರ ನಡೆಸುತ್ತಿದ್ದೀರಾ? ಎಂಬ ಪ್ರಶ್ನೆಗಳು ಸದ್ಯ ಕೇಳಿ ಬಂದಿದೆ. ಬುದ್ಧರು ಪ್ರಪಂಚದ ವಾಸ್ತವತೆಗಳನ್ನು ತೆರೆದಿಟ್ಟವರು. ಯಾರಿಗೋ  ನೋವಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳನ್ನು  ಸತ್ಯ ಎಂದು ಒಪ್ಪಿಕೊಳ್ಳಬೇಕೇ  ಶಿಕ್ಷಣ ಮಂತ್ರಿಗಳೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಸರ್ಕಾರದ ಈ ನಡೆಯ ವಿರುದ್ಧ ಭಾರೀ ಪ್ರತಿಭಟನೆ ವ್ಯಕ್ತವಾಗುವ ಸಾಧ್ಯತೆ ಇದೆ. ಬೇರೆ ಜಾತಿಯವರು ತಮಗೆ ನೋವಾದರೆ ಸರ್ಕಾರದ ವಿರುದ್ಧ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳಬೇಕು. ಆದರೆ, ಬ್ರಾಹ್ಮಣರು ಒಂದು ದೂರು ಕೂಡ ಅಧಿಕೃತವಾಗಿ ನೀಡದೆ ಮನವಿ ಮಾಡಿದರೂ ಸರ್ಕಾರ ಕಣ್ಣು ಮುಚ್ಚಿ ತೀರ್ಮಾನ ಕೈಗೊಳ್ಳುತ್ತಿದೆ. ಈ ರೀತಿಯ ಬೇಧ ಭಾವಗಳನ್ನು ಸರ್ಕಾರ ಬಿಡಬೇಕು. ಹಿಂದೆ ಹೇಗೆ ಹೊಸ ಧರ್ಮಗಳ ಉದಯ ಪಾಠ ಇತ್ತೋ ಹಾಗೆಯೇ ಅದನ್ನು ಬೋಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ