ಕೊಕೇನ್ ಸಾಗಾಟ: ಬಿಜೆಪಿ ಯುವ ಮುಖಂಡೆ ಬಂಧನ
ಕೋಲ್ಕತ್ತಾ: ಕೊಕೇನ್ ಸಾಗಿಸಿದ ಆರೋಪದ ಮೇಲೆ ಬಿಜೆಪಿ ಯುವ ಮುಖಂಡೆ ಎಂ.ಎಸ್.ಗೋಸ್ವಾಮಿಯನ್ನು ಬಂಗಾಳದ ಕೋಲ್ಕತ್ತಾದಲ್ಲಿ ಶುಕ್ರವಾರ ಬಂಧಿಸಲಾಗಿದ್ದು, ಕೊಕೇನ್ ವಶಪಡಿಸಿಕೊಳ್ಳಲಾಗಿದೆ.
ಪರ್ಸ್ ಹಾಗೂ ಕಾರಿನಲ್ಲಿ ಕೊಕೇನ್ ಸಾಗಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಇಲ್ಲಿನ ದುಬಾರಿ ನ್ಯೂ ಅಲಿಪೋರ್ ಪ್ರದೇಶದಲ್ಲಿ, ಗೋಸ್ವಾಮಿ ಮತ್ತು ಅವರ ಸಹವರ್ತಿ ಎನ್.ಆರ್.ಅವೆನ್ಯೂ ಕೆಫೆಯೊಂದರೊಳಗೆ ತೆರಳಿದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿತರಿಂದ 100 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನೂ ಬಂಧಿಸಲಾಗಿದ್ದು, ಪ್ರಬೀರ್ ಕುಮಾರ್ ಡೇ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿಯ ಸಮಿಕ್ ಭಟ್ಟಾಚಾರ್ಯ, ಕೊಕೇನ್ ನ್ನು ಯಾರೋ ಕಾರಿನೊಳಗೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ತೃಣಮೂಲ ಕಾಂಗ್ರೆಸ್ ಮುಖಂಡ ಚಂದ್ರಿಮಾ ಭಟ್ಟಾಚಾರ್ಯ, ಬಂಗಾಳ ಬಿಜೆಪಿಯ ನಿಜವಾದ ಚಿತ್ರಣ ಇದು. ಈ ಹಿಂದೆಯೂ ಹಲವು ನಾಯಕರನ್ನು ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಹೆಸರಿಸಲಾಗಿದೆ ಎಂದು ಹೇಳಿದ್ದಾರೆ.