ಗಂಡ ಝೂಮ್ ನಲ್ಲಿರುವಾಗಲೇ ಪತ್ನಿ ಎಂತಹ ಕೆಲಸ ಮಾಡಿದ್ದಾಳೆ ನೋಡಿ
ನವದೆಹಲಿ: ಗಂಡ ಝೂಮ್ ನಲ್ಲಿದ್ದಾನೆ ಎನ್ನುವುದು ಪತ್ನಿಗೆ ಗೊತ್ತೇ ಇಲ್ಲ. ಪತ್ನಿ ತನ್ನ ಗಂಡನಿಗೆ ಮುತ್ತಿಡಲು ಮುಂದಾಗಿದ್ದಾಳೆ. ಈ ವೇಳೆ ಗಂಡ, ತಾನು ಝೂಮ್ ನಲ್ಲಿರುವುದು ನಿನಗೆ ಗೊತ್ತಿಲ್ವಾ ಎಂದು ಪತ್ನಿಯನ್ನು ದುರುಗುಟ್ಟಿ ನೋಡಿದ್ದಾನೆ.
ಹರ್ಷ ಎನ್ನುವವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಹರೀಶ್ ಅವರು, “”ಝೂಮ್ ಕಾಲ್ ಸೋ ಫನ್ನಿ” ಎಂದು ಟೈಟಲ್ ನೀಡಿದ್ದಾರೆ.
ಕೈಗಾರಿಕೋದ್ಯಮಿಯೊಬ್ಬ ಜೂಮ್ ಮೀಟಿಂಗ್ ನಲ್ಲಿದ್ದು, ಈತ ಮೀಟಿಂಗ್ ನಲ್ಲಿದ್ದಾನೆ ಎಂಬ ಅರಿವಿಲ್ಲದ ಪತ್ನಿ, ರೂಮ್ ಬಾಗಿಲು ತೆಗೆದು ನೇರವಾಗಿ ಪತಿಯ ಬಳಿಗೆ ಬಂದು ಮುತ್ತಿಡಲು ಮುಂದಾಗಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಎಲ್ಲವೂ ವಿಡಿಯೋ ಕಾಲ್ ಗಳ ಮೂಲಕವೇ ನಡೆಯುತ್ತಿದೆ. ಇದರೊಂದಿಗೆ ಇಲ್ಲದ ಯಡವಟ್ಟೂ ಆಗುತ್ತಿವೆ. ಈ ವಿಡಿಯೋ ಕಾಲ್ ನಿಂದಾಗಿ ಹಲವು ಯಡವಟ್ಟುಗಳು ನಡೆಯುತ್ತಿದ್ದು, ಬಟ್ಟೆಗಳಿಲ್ಲದೆಯೇ ವಿಡಿಯೋ ಕಾಲ್ ನಲ್ಲಿ ಭಾಗವಹಿಸಿ ಬಹಳಷ್ಟು ಜನರು ಮುಜುಗರಕ್ಕೀಡಾಗಿದ್ದಾರೆ.
Zoom call …..so funny 😄 😄😄pic.twitter.com/6SV62xukMN
— Harsh Goenka (@hvgoenka) February 19, 2021