ಬಿಜೆಪಿಯ ಆಡಳಿತದಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನೇ ಅತ್ಯಾಚಾರಕ್ಕೆ ಹೊಣೆ ಮಾಡಲಾಗುತ್ತಿದೆ | ರಾಹುಲ್ ಗಾಂಧಿ
20/02/2021
ನವದೆಹಲಿ: ಬಿಜೆಪಿಯು ಅತ್ಯಾಚಾರಕ್ಕೆ ಸಂತ್ರಸ್ತರನ್ನೇ ಹೊಣೆ ಮಾಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಮಧ್ಯಪ್ರದೇಶದ 24 ವರ್ಷ ವಯಸ್ಸಿನ ಮಹಿಳೆಯ ಮೇಲೆ ನಡೆದ ಭೀಕರ ಹಲ್ಲೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ ಈ ಆರೋಪ ಮಾಡಿದ್ದು, ಆರೋಪಿಗಳನ್ನು ಬಂಧಿಸುವ ಬದಲು, ಬಿಜೆಪಿಯು ಸಂತ್ರಸ್ತೆಯನ್ನೇ ಈ ಘಟನೆಗೆ ಹೊಣೆಗಾರರು ಎಂಬಂತೆ ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದು 1 ತಿಂಗಳಾದರೂ ಭೋಪಾಲ್ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ, ಬಿಜೆಪಿಯು ಅತ್ಯಾಚಾರ ಸಂತ್ರಸ್ತೆಯನ್ನೇ ಘಟನೆಗೆ ಹೊಣೆ ಮಾಡುತ್ತಿದೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ಹಿಂದೇಟು ಹಾಕುತ್ತಿದ್ದು, ಇದರಿಂದ ಅತ್ಯಾಚಾರದ ಅಪರಾಧಿಗಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.