ಮನೆ ಕೆಲಸಕ್ಕೆಂದು ಬಂದ ದಂಪತಿ ಮಾಡಿದ ಕೆಲಸಕ್ಕೆ ಬೆಚ್ಚಿಬಿದ್ದ ಮಾಲಿಕರು!
![arest](https://www.mahanayaka.in/wp-content/uploads/2024/03/arest-1.jpg)
ಬೆಂಗಳೂರು: ಮನೆ ಕೆಲಸಕ್ಕೆಂದು ಬಂದಿದ್ದ ನೇಪಾಳದ ದಂಪತಿ ಲಕ್ಷಾಂತರ ನಗದು ಸೇರಿದಂತೆ 1 ಕೋಟಿ ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಹೋಗಿರುವ ಬಗ್ಗೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಿನೇಶ್(21) ಹಾಗೂ ಮೇನಕಾ(20) ಬಂಧಿತ ಆರೋಪಿಗಳಾಗಿದ್ದಾರೆ. ಎರಡು ತಿಂಗಳ ಹಿಂದೆ ಕೋಡಿಗೇಹಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಗೆ ಈ ದಂಪತಿ ಕೆಲಸಕ್ಕೆ ಸೇರಿದ್ದರು.
ಆರೋಪಿ ದಿನೇಶ್ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರೆ, ಮೇನಕಾ ಮನೆ ಕೆಲಸ ಮಾಡುತ್ತಿದ್ದಳು. ಕಳೆದ 27ರಂದು ಉದ್ಯಮಿ ಕೆಲಸ ಹಿನ್ನೆಲೆ ಹೊರ ಹೋಗಿದ್ದರು.28ರಂದು ರಾತ್ರಿ ಮನೆಗೆ ವಾಪಸ್ ಆದ ವೇಳೆ ಅವರ ಸೊಸೆ ಅರೆಪ್ರಜ್ಞಾವಸ್ಥೆಯಲ್ಲಿರುವುದು ಕಂಡು ಆತಂಕದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಳಿಕ ಮನೆಯನ್ನು ಪರಿಶೀಲನೆ ನಡೆಸಿದ ವೇಳೆ 40 ಲಕ್ಷ ರೂ ನಗದು, ವಿದೇಶಿ ಕರೆನ್ಸಿ, 2 ಚಿನ್ನದ ಉಂಗುರ, 3 ದುಬಾರಿ ವಾಚ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನೀಡಲಾಗಿದ್ದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth