ನರಿಯ ದಾಳಿಗೆ ಬೆಚ್ಚಿಬಿದ್ದ ಗ್ರಾಮಸ್ಥರು: ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿದ ನರಿ

ಗದಗ: ಹುಲಿ, ಚಿರತೆ, ಆನೆ, ಕಾಡು ಹಂದಿಗಳ ದಾಳಿಯಿಂದ ಜನರು ಕಂಗೆಟ್ಟಿದ್ದಾರೆ. ಈ ನಡುವೆ ನರಿಯೂ ದಾಳಿ ನಡೆಸಲು ಆರಂಭಿಸಿದ್ದು, ನರಿಯ ದಾಳಿಗೆ ಗದಗ ಶಿರಹಟ್ಟಿ ತಾಲೂಕಿನ ಮಜ್ಜೂರು ಗ್ರಾಮದ ಜನರು ಕಂಗಾಲಾಗಿದ್ದಾರೆ.
ಗ್ರಾಮದ ಸಮೀರ್ ಹೆಸರೂರು, ಬೀಬಿಜಾನ್ ಬಟ್ಟೂರ, ಸಂತೋಷ ಲಮಾಣಿ ಎಂಬವರ ಮೇಲೆ ನರಿ ದಾಳಿ ನಡೆಸಿದೆ.
ಜಮೀನಿಗೆ ಹೋಗಿದ್ದ ವೇಳೆ ನರಿ ಏಕಾಏಕಿ ದಾಳಿ ನಡೆಸಿತ್ತು. ಕಂಡ ಕಂಡವರ ಮೇಲೆ ನರಿ ದಾಳಿ ನಡೆಸಿತ್ತು. ಇದರಿಂದಾಗಿ ಗ್ರಾಮಸ್ಥರು ಜಮೀನಗಳಿಗೆ ತೆರಳಲು ಸಾಧ್ಯವಾಗದೇ ಆತಂಕದಲ್ಲಿದ್ದಾರೆ.
ಗಾಯಾಳುಗಳು ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲು, ಕೈಬೆರಳುಗಳಿಗೆ ಕಚ್ಚಿ ನರಿ ಗಾಯ ಮಾಡಿದೆ. ನದಿಗೆ ಹುಚ್ಚು ಹಿಡಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದು, ತಕ್ಷಣವೇ ನರಿಯನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth