ಕಾರ್ ಅಡ್ಡಗಟ್ಟಿ, ಗನ್ ಪಾಯಿಂಟ್ ನಲ್ಲಿ ಮಹಿಳೆಯ ಗ್ಯಾಂಗ್ ರೇಪ್ |  ಕೊನೆಗೂ ಆರೋಪಿಯ ಬಂಧನ - Mahanayaka
1:19 PM Friday 20 - September 2024

ಕಾರ್ ಅಡ್ಡಗಟ್ಟಿ, ಗನ್ ಪಾಯಿಂಟ್ ನಲ್ಲಿ ಮಹಿಳೆಯ ಗ್ಯಾಂಗ್ ರೇಪ್ |  ಕೊನೆಗೂ ಆರೋಪಿಯ ಬಂಧನ

23/02/2021

ಭುವನೇಶ್ವರ್:  ಮಹಿಳೆಯನ್ನು ಗನ್ ಪಾಯಿಂಟ್ ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣದ  ಪ್ರಮುಖ ಆರೋಪಿಯನ್ನು 22 ವರ್ಷಗಳ ಬಳಿಕ ಬಂಧಿಸಿರುವ ಘಟನೆ ನಡೆದಿದ್ದು, 1999ರಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಮಹಿಳೆಯೋರ್ವರನ್ನು ಅವರ ಸ್ನೇಹಿತನ ಎದುರಲ್ಲಿಯೇ ಸಾಮೂಹಿಕವಾಗಿ ಅತ್ಯಾಚಾರ ನಡೆಸಲಾಗಿತ್ತು.

ಒಡಿಶಾ ರಾಜಧಾನಿ ಭುವನೇಶ್ವರ್ ​ನ ಪೊಲೀಸ್​ ಆಯುಕ್ತರಾದ ಸುಧಾನ್ಶು ಸಾರಂಗಿ ಅವರು ಬೆರ್ಹಾಂಪುರ್​ ಪೊಲೀಸ್​ ವರಿಷ್ಠಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಈ ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಲಾಗಿದ್ದರೂ, ಪ್ರಮುಖ ಆರೋಪಿಯ ಬಂಧನವಾಗಿರಲಿಲ್ಲ.

ಬಿಬನ್ ಬಿಸ್ವಾಲ್  ಬಂಧಿತ ಆರೋಪಿಯಾಗಿದ್ದಾನೆ. ಈತ ಮಹಿಳೆ ಪ್ರಯಾಣಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಗನ್ ಪಾಯಿಂಟ್ ನಲ್ಲಿ ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದ. ಈ ಪ್ರಕರಣದ ಇತರ ಆರೋಪಿಗಳ ಬಂಧನವಾಗಿದ್ದರೂ, ಬಿಸ್ವಾಲ್ ನ ಬಂಧನವಾಗಿರಲಿಲ್ಲ. ಈ ಪ್ರಕರಣ ಮರು ಜೀವ ಪಡೆದುಕೊಂಡ ಬಳಿಕ, ಬಂಧಿತ ಮೂವರು ಆರೋಪಿಗಳಲ್ಲಿ ಓರ್ವನಾದ ಧೀರೇಂದ್ರನನ್ನು ಮೂರು ತಿಂಗಳ ಹಿಂದೆ ಚೌದ್ವಾರ್ ಜೈಲಿನಲ್ಲಿ ಕಮಿಷನರ್ ಭೇಟಿ ಮಾಡಿದ್ದು, ಆತನಿಂದ ಮಾಹಿತಿ ಪಡೆದುಕೊಂಡಿದ್ದರು ಎಂದು ಸಾರಂಗಿ ಹೇಳಿದ್ದಾರೆ.


Provided by

ಬಿಬನ್ ಬಿಸ್ವಾಲ್   ನ ಕುಟುಂಬ ಆತನ ಮರಣ ಸರ್ಟಿಫಿಕೆಟ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿತ್ತು. ಇದೇ ಸಂದರ್ಭದಲ್ಲಿ ಬಿಎಸ್ವಾಲ್ ನ ಪುತ್ರ ಯಾವುದೋ ಅನ್ಯ ಆದಾಯದ ಮೂಲಕಗಳನ್ನುಹೊಂದಿದ್ದಾನೆ ಎನ್ನುವುದು ತಿಳಿಯಿತು. ಈ ಮಾಹಿತಿಯನ್ನು ಬೆನ್ನಟ್ಟಿದಾಗ ಬಿಸ್ವಾಲ್ ಇನ್ನೂ ಬದುಕಿದ್ದಾನೆ ಎನ್ನುವುದು ತಿಳಿಯಿತು ಎಂದು ಸಾರಂಗಿ ಹೇಳಿದ್ದಾರೆ.

ಕೃತ್ಯದ ಬಳಿಕ ಜಲಂದರ್ ಸ್ವೈನ್ ಎಂಬ ಹೆಸರಿನಲ್ಲಿ ಆಯಂಬಿ ವ್ಯಾಲಿಯಲ್ಲಿ  ಬಿಸ್ವಾಲ್ ಬದುಕಿದ್ದ. ಆತ ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ನ್ನು ಕೂಡ ಎಂದು ತಿಳಿದು ಬಂದಿದೆ. ಈ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸುಧಾನ್ಯು ಸಾರಂಗಿ ಮಾಹಿತಿ  ನೀಡಿದರು.

ಇತ್ತೀಚಿನ ಸುದ್ದಿ