ವಿಮಾನಯಾನ ಹಗರಣ: ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಗೆ ಕ್ಲೀನ್ ಚಿಟ್ - Mahanayaka
1:15 PM Saturday 21 - September 2024

ವಿಮಾನಯಾನ ಹಗರಣ: ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಗೆ ಕ್ಲೀನ್ ಚಿಟ್

29/03/2024

ಬಿಜೆಪಿಯನ್ನು ವಾಷಿಂಗ್ ಮೆಷಿನ್ ಎಂದು ಹೇಳುವುದಕ್ಕೂ ಅದು ನಡೆದುಕೊಳ್ಳುವುದಕ್ಕೂ ಸರಿ ಹೋಯ್ತು ಎಂಬಂತಾಗಿದೆ. ಈ ಮೊದಲು ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರು ಎನ್ ಡಿ ಎ ಬಳಗ ಸೇರಿದ ಬಳಿಕ ಹಗರಣಗಳಿಂದ ಕ್ಲೀನ್ ಚಿಟ್ ಸಿಕ್ಕಿತ್ತು. ಇದೀಗ ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಅವರಿಗೂ ವಿಮಾನಯಾನ ಹಗರಣದಿಂದ ಕ್ಲೀನ್ ಚಿಟ್ ದೊರಕಿದೆ. ಹೀಗೆ ಇಬ್ಬರು ಕೂಡ ಹಗರಣಗಳಿಂದ ಮುಕ್ತವಾಗಿದ್ದಾರೆ.

ಪ್ರಫುಲ್ ಪಟೇಲ್ ಅವರಿಗೆ ಸಂಬಂಧಿಸಿದ ವಿಮಾನಯಾನ ಹಗರಣದ ಪ್ರಕರಣದ ಮುಕ್ತಾಯದ ಮಾಹಿತಿಯನ್ನು ಸಿಬಿಐ ದೆಹಲಿ ಕೋರ್ಟಿಗೆ ಒಪ್ಪಿಸಿದೆ. ಏರ್ ಇಂಡಿಯಾಕ್ಕೆ ವಿಮಾನವನ್ನು ಖರೀದಿಸಿದ ವಿಷಯದಲ್ಲಿ ಅಕ್ರಮಗಳಾಗಿವೆ ಎಂದು 2017ರಲ್ಲಿ ಪ್ರಫುಲ್ ಪಟೇಲ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ದಾಖಲಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ದೇಶದ ಬೊಕ್ಕಸಕ್ಕೆ 840 ಕೋಟಿ ರೂಪಾಯಿಯನ್ನು ನಷ್ಟ ಮಾಡಲಾಗಿದೆ ಎಂಬ ಆರೋಪ ಅವರ ಮೇಲಿತ್ತು ಹಾಗೆಯೇ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್, ಹಗರಣಕ್ಕೆ ಸಂಬಂಧಿಸಿದ ಅಜಿತ್ ಪವರ್ ವಿರುದ್ಧ ಮುಂಬೈ ಪೊಲೀಸ್ ತನಿಖೆಯನ್ನು ಆರಂಭಿಸಿತ್ತು. ಇದು 25,000 ಕೋಟಿ ರೂಪಾಯಿಯ ಹಗರಣವಾಗಿದೆ..

ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಫುಲ್ ಪಟೇಲ್ ಅವರು ವಿಮಾನಯಾನ ಸಚಿವರಾಗಿದ್ದರು. ಮತ್ತು ಆ ಕಾಲದಲ್ಲಿ ಈ ಹಗರಣ ನಡೆದಿದೆ ಎಂದು ಸಿಬಿಐ ಆರೂಪಿಸಿತ್ತು. ಇದೀಗ ಇವರಿಬ್ಬರೂ ಬಿಜೆಪಿ ಮತ್ತು ಎನ್.ಡಿ.ಎ ಪಾಳಯ ಸೇರ್ಕೊಂಡಿದ್ದು ಇವರಿಬ್ಬರ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ. ಈ ಮೂಲಕ ಬಿಜೆಪಿ ಸೇರಿದರೆ ಎಲ್ಲ ಹಗರಣಗಳಿಂದಲೂ ಮುಕ್ತವಾಗಿ ಹೊರ ಬರಬಹುದು ಅನ್ನುವ ಮಾತಿಗೆ ಪುಷ್ಟಿ ನೀಡಿದೆ. ವಿರೋಧ ಪಕ್ಷಗಳು ಬಿಜೆಪಿಯನ್ನು ವಾಷಿಂಗ್ ಮೆಷಿನ್ ಎಂದು ಕರೆಯುತ್ತಿವೆ. ಅದಕ್ಕೆ ಪೂರಕವಾದ ಬೆಳವಣಿಗೆಗಳು ಈಗ ನಡೆಯುತ್ತಿವೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ