ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯ ಬರ್ಬರ ಹತ್ಯೆ: ಕಾರಣ ಬಯಲು
23/02/2021
ಮಡಿಕೇರಿ: ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ಮಹಳೆಯನ್ನು ಹತ್ಯೆ ಮಾಡಿ ಮನೆ ದರೋಡೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೆ.ನಿಡುಗಣೆಯಲ್ಲಿ ನಡೆದಿದೆ.
ತೋಟದೊಳಗಡೆ ಇರುವ ಮನೆಯಲ್ಲಿ ಲಲಿತಾ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಮಾಹಿತಿ ತಿಳಿದ ಯಾರೋ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಹೇಳಲಾಗಿದೆ.
ಕಾಫಿ ತೋಟದಲ್ಲಿ ಉತ್ತಮ ಬೆಳೆ ಬಂದಿದ್ದರಿಂದ 50 ಸಾವಿರ ರೂಪಾಯಿಗಳನ್ನು ಲಲಿತಾ ಅವರ ಮಗ ಮನೆಯಲ್ಲಿ ಇಟ್ಟಿದ್ದರು. ಲಲಿತಾ ಅವರ ಮಗ ಮೈಸೂರಿನಲ್ಲಿದ್ದರು. ಆದರೆ, ಕಾಫಿಯಿಂದ ಇವರಿಗೆ ಹಣ ಬಂದಿದೆ ಎಂದು ತಿಳಿದ ಯಾರೋ ಈ ಕೃತ್ಯ ಎಸಗಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ.
ತಮ್ಮ ತೋಟದಲ್ಲಿ ಕೆಲಸ ಮಾಡಿದ ಬಳಿಕ ಸಂಜೆ ಲಲಿತಾ ಅವರು, ಸ್ನಾನದ ಮನೆಗೆ ನೀರು ಬಿಸಿ ಮಾಡಲು ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಇವರ ಮೇಲೆ ದಾಳಿ ನಡೆಸಿ ಹತ್ಯೆ ನಡೆಸಿದ್ದು, ಬಳಿಕ ದರೋಡೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.