ಇಸ್ರೇಲ್‌ ತಡೆಬೇಲಿ ಭೇದಿಸಿ ಮಸ್ಜಿದುಲ್ ಅಕ್ಸದ ಜುಮಾ ನಮಾಜ್ ನಲ್ಲಿ ಭಾಗಿಯಾದ ಲಕ್ಷಾಂತರ ಮಂದಿ - Mahanayaka
11:13 AM Saturday 21 - September 2024

ಇಸ್ರೇಲ್‌ ತಡೆಬೇಲಿ ಭೇದಿಸಿ ಮಸ್ಜಿದುಲ್ ಅಕ್ಸದ ಜುಮಾ ನಮಾಜ್ ನಲ್ಲಿ ಭಾಗಿಯಾದ ಲಕ್ಷಾಂತರ ಮಂದಿ

30/03/2024

ಇಸ್ರೇಲ್ ನ ನಿಯಂತ್ರಣ ಮತ್ತು ಹತ್ತು ಹಲವು ರೀತಿಯ ತಡೆಗಳನ್ನು ಭೇದಿಸಿ ರಮಝಾನಿನ ಮೂರನೇ ಶುಕ್ರವಾರವಾದ ಮಾರ್ಚ್ 29ರಂದು ಮಸ್ಜಿದುಲ್ ಅಕ್ಸದ ಜುಮಾ ನಮಾಜ್ ಗೆ 1,25,000 ಮಂದಿ ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ವರ್ಷ ರಮಝಾನಿನ ಮೂರನೇ ಶುಕ್ರವಾರದಂದು ಇದೇ ಮಸೀದಿಯಲ್ಲಿ ಎರಡು ಲಕ್ಷದ 50,000 ಮಂದಿ ಜುಮಾ ನಮಾಜ್ ನಿರ್ವಹಿಸಿದ್ದರು.

55 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಮಸ್ಜಿದುಲ್ ಅಕ್ಸ ಪ್ರವೇಶಕ್ಕೆ ಇಸ್ರೇಲ್ ಅನುಮತಿ ನೀಡುತ್ತಿದೆ.
ಮುಸ್ಲಿಮರು ಮಸೀದಿ ಪ್ರವೇಶಿಸದಂತೆ ತಡೆಯುವುದಕ್ಕಾಗಿ ಮಸೀದಿ ಬಾಗಿಲುಗಳಲ್ಲಿ ಮತ್ತು ಜೆರುಸಲೇಮ್ ನಗರದಲ್ಲಿ ಭಾರಿ ಬ್ಯಾರಿಕೇಡ್ ಗಳನ್ನು ಇಸ್ರೇಲ್ ಸೇನೆ ನಿಯೋಜಿಸಿತು. ಜೆರುಸಲೇಮಿನಲ್ಲಿರುವ ವಿವಿಧ ರಸ್ತೆಗಳಲ್ಲಿ ಅನೇಕ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿತ್ತು. ಈ ಕುರಿತಾದ ವಿವಿಧ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ