ಅಲ್ ಜಝೀರಾ ಚಾನೆಲ್ ಮೇಲೆ ಇಸ್ರೇಲ್ ಕೆಂಗಣ್ಣು - Mahanayaka
3:54 PM Friday 20 - September 2024

ಅಲ್ ಜಝೀರಾ ಚಾನೆಲ್ ಮೇಲೆ ಇಸ್ರೇಲ್ ಕೆಂಗಣ್ಣು

02/04/2024

ಅಲ್ ಜಝೀರಾ ಭಯೋತ್ಪಾದಕ ಚಾನೆಲ್ ಆಗಿದ್ದು ಅದನ್ನು ಇಸ್ರೇಲ್ ನಲ್ಲಿ ಪ್ರತಿಬಂಧಿಸುತ್ತೇವೆ ಎಂದು ಪ್ರಧಾನಿ ನೇತನ್ಯಾಹು ಹೇಳಿದ್ದಾರೆ. ಇಸ್ರೇಲ್ ನ ಸುರಕ್ಷತೆಗೆ ಅಪಾಯ ಒಡ್ಡಿರುವ ಅಕ್ಟೋಬರ್ 7ರ ದಾಳಿಯಲ್ಲಿ ಭಾಗಿಯಾಗಿರುವ ಮತ್ತು ಇಸ್ರೇಲ್ ಸೇನೆಯ ವಿರುದ್ಧ ಆಕ್ರೋಶ ಹುಟ್ಟು ಹಾಕಿರುವ ಆರೋಪವನ್ನು ಅಲ್ ಜಝೀರಾ ಚಾನಲ್ ಮೇಲೆ ಅವರು ಆರೋಪ ಹೊರಿಸಿದ್ದಾರೆ.

ಇದೇ ವೇಳೆ ನೇತಾನ್ಯಾಹು ಅವರ ಆರೋಪಕ್ಕೆ ಅಲ್ ಜಝೀರಾ ಚಾನೆಲ್ ತೀವ್ರ ಆತಂಕ ವ್ಯಕ್ತಪಡಿಸಿದೆ. ಜಾಗತಿಕವಾಗಿ ತನ್ನ ವರದಿಗಾರರು ಮತ್ತು ಸಿಬ್ಬಂದಿಗಳ ಸುರಕ್ಷಾ ಹೊಣೆಗಾರಿಕೆಯು ಅವರ ಮೇಲಿದೆ ಎಂದು ಅದು ಹೇಳಿದೆ.

ಇಂತಹ ಆರೋಪಗಳು ನಮ್ಮ ಈವರೆಗಿನ ಸತ್ಯಕ್ಕಾಗಿನ ಹೋರಾಟದಲ್ಲಿ ಹಿಂಜರಿಕೆ ಮಾಡಲಾರದು ಎಂದು ಕೂಡ ಅದು ಹೇಳಿದೆ.
ಕತಾರ್ ಕೇಂದ್ರೀತ ಈ ಚಾನಲ್ ಈ ಮೊದಲೂ ಇಸ್ರೇಲ್ ನ ಕೋಪಕ್ಕೆ ತುತ್ತಾಗಿತ್ತು. ಇಸ್ರೇಲ್ ವಿರೋಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ ಎಂಬುದೇ ಬಹುಮುಖ್ಯ ಆರೋಪವಾಗಿತ್ತು.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ